ಇತರೆ

500 ರೂಪಾಯಿಗೆ 4 ಸೀರೆ…ಸೂಪರ್ ಆಫರ್‌ಗೆ ಮುಗಿಬಿದ್ದ ಮಹಿಳೆಯರು..! ಫಜಿತಿಗೊಳಗಾದ ಮಾಲೀಕ ಮಾಡಿದ್ದೇನು?

Views: 348

ಕನ್ನಡ ಕರಾವಳಿ ಸುದ್ದಿ: ಕೇವಲ 500 ರೂಪಾಯಿಗೆ 4 ಸೀರೆಗಳು ಸಿಗುತ್ತದೆ ಅಂದರೆ ಯಾರು ತಾನೇ ಸುಮ್ಮನೆ ಬಿಡ್ತಾರೆ ಹೇಳಿ. ಇದೀಗ ಅಂಗಡಿ ಮಾಲೀಕನೊಬ್ಬ 500 ರೂಪಾಯಿಗೆ 4 ಸೀರೆಗಳು ಅಂತ ಆಫರ್ ಬಿಟ್ಟು ಫಜಿತಿಗೆ ಸಿಕ್ಕಿಹಾಕಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ.ನೂತನ ಬಟ್ಟೆ ಅಂಗಡಿ ಮಾಲೀಕರು ಓಪನಿಂಗ್‌ಗೆ ಅಂತ ಮಹಿಳೆಯರಿಗೆ 500 ರೂಪಾಯಿಗೆ 4 ಸೀರೆ ಆಫರ್ ಕೊಟ್ಟಿದ್ದಾರೆ. ಈ ಆಫರ್‌ ಬಗ್ಗೆ ತಿಳಿದ್ದೇ ತಡ ಮಹಿಳೆಯರೆಲ್ಲ ನಾ ಮುಂದು, ತಾ ಮುಂದು ಅಂತ ಅಂಗಡಿಗೆ ಧಾವಿಸಿದ್ದಾರೆ. ಮಂಡ್ಯದ ವಿವಿ ರಸ್ತೆಯಲ್ಲಿ ಸೆಂಥಿಲ್ ಕುಮಾರ್ ಟೆಕ್ಸ್ಟೈಲ್ ಅಂಗಡಿಯ ಉದ್ಘಾಟನೆ ವೇಳೆ 500 ರೂಪಾಯಿಗೆ 4 ಸೀರೆ ಅಂತ ಆಫರ್ ಘೋಷಣೆ ಮಾಡಿದ್ದರು.

ಇದೇ ವೇಳೆ ಸೀರೆಯನ್ನು ಕೊಳ್ಳಲು ಮಹಿಳೆಯರ ಮಧ್ಯೆ ನೂಕುನುಗ್ಗಲು ಉಂಟಾಗಿದೆ. ಏಕಾಏಕಿ ನೂರಾರು ಮಹಿಳೆಯರ ಜಮಾವಣೆ ಕಂಡು ಸೀರೆಯನ್ನು ವಿತರಿಸಲಾಗದೆ ಮಾಲೀಕ ಕಂಗಾಲಾಗಿದ್ದ. ಮಹಿಳೆಯ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಂಗಡಿ ಬಾಗಿಲು ಕ್ಲೋಸ್ ಮಾಡಿಬಿಟ್ಟಿದ್ದಾರೆ. ಓಡೋಡಿ ಬಂದ ನೂರಾರು ಮಹಿಳೆಯರು ಬಿಸಿಲಿನಲ್ಲಿಯೇ ಕಾದು ನಿಂತ ದೃಶ್ಯ ಕಂಡು ಬಂದಿದೆ.

Related Articles

Back to top button