ಧರ್ಮಸ್ಥಳ ಮುಂದುವರಿದ ಶವ ಶೋಧ: ದೂರುದಾರನ ಪರ ಇಬ್ಬರು ಸಾಕ್ಷಿದಾರರು ಎಂಟ್ರಿ!

Views: 162
ಕನ್ನಡ ಕರಾವಳಿ ಸುದ್ದಿ: ಭಾರಿ ಮಳೆಯ ನಡುವೆಯೂ 8 ಅಡಿಗೂ ಹೆಚ್ಚು ಆಳಕ್ಕೆ ಹಿಟಾಚಿ ಬಳಸಿ ಗುಂಡಿ ತೋಡಲಾಗುತ್ತಿದೆ. ಅಧಿಕಾರಿಗಳು ಕೂಡಾ ಮಳೆಯಲ್ಲಿ ಕೊಡೆ, ರೈನ್ ಕೋಟ್ ಹಾಕಿ ಕಾರ್ಯಾಚರಣೆ ಜಾಗದಲ್ಲಿ ಮೊಕ್ಕಾಂ ಹೂಡಿದ್ದಾರೆ.
14 ನೇ ದಿನದ ಕಾರ್ಯಾಚರಣೆಯಲ್ಲಿ 13ನೇ ಸ್ಥಳದಲ್ಲಿಯೇ ಉತ್ಪನನ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು, ದೂರುದಾರ ಹಾಗೂ ದೊಡ್ಡ ಹಿಟಾಚಿ ಸ್ಥಳಕ್ಕೆ ಬಂದಿದೆ. ಶಾಮಿಯಾನ ಹಾಗೂ ಚೇರ್‌ಗಳನ್ನು ಹಾಕಿ ಸಿದ್ದತೆ ಮಾಡಲಾಗಿದೆ. ಎಸ್‌ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ. ಯಾವ ಸ್ಥಳ ಎಂದು ಅಧಿಕಾರಿಗಳು ದೂರುದಾರನ ಕೇಳುತ್ತಿದ್ದಾರೆ. ಆತ ಪಾಯಿಂಟ್ ಹುಡುಕಾಟ ನಡೆಸುತ್ತಿದ್ದಾನೆ. ದೂರುದಾರ 13 ನೇ ಸ್ಥಳದ ಬಗ್ಗೆ ಬಹಳ ನಂಬಿಕೆ ಹೊಂದಿದ್ದ. ಅಲ್ಲದೆ ಜಿಪಿಆರ್ ಬಳಕೆಗೂ ಒತ್ತಾಯ ಮಾಡಿದ್ದರು. ಎಲ್ಲಾ ಆಧುನಿಕ ತಂತ್ರಜ್ಞಾನಗಳ ಬಳಕೆ ಮಾಡಿದ್ದರೂ, ಶವ ಹೂತ ಕುರುಹು ಸಿಕ್ಕಿಲ್ಲ.
ಮಂಗಳವಾರವೂ ಬರೋಬ್ಬರಿ 9 ಗಂಟೆಯವರೆಗೆ ಶೋಧ ನಡೆಸಿದ ಜಾಗವನ್ನು ಮುಚ್ಚಲು ಸಮಯ ತೆಗೆದುಕೊಂಡಿತ್ತು. ಇಂದು ಕೂಡಾ 13 ನೇ ಸ್ಥಳದಲ್ಲಿ ಭದ್ರತೆ ಮುಂದುವರಿಸಲಾಗಿದೆ.
ಮಂಪರು ಪರೀಕ್ಷೆಗೆ ಒತ್ತಾಯ
30 ಜಾಗಗಳಲ್ಲಿ 300 ಶವ ಹೂತಿರುವುದಾಗಿ ದೂರು ಕೊಟ್ಟಿದ್ದಾನೆ. ಈಗಾಗಲೇ ಎಲ್ಲೆಡೆಯಿಂದ ದೂರುದಾರನ ಬ್ರೈನ್ ಮ್ಯಾಪಿಂಗ್ ನಡೆಸಲು ಕೂಡಾ ಹಲವರು ಒತ್ತಾಯಪಡಿಸಿದ್ದಾರೆ.
ದೂರುದಾರನ ಪರ ಇಬ್ಬರು ಸಾಕ್ಷಿದಾರರು ಇಂದು ಎಂಟ್ರಿ
ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಇಂದು ದೂರುದಾರನ ಪರ ಸಾಕ್ಷಿಗಳು ಬಂದಿದ್ದಾರೆ. ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ. ನಮಗೂ ದೂರುದಾರನ ಪರಿಚಯ ಇದೆ. ಹೆಣ ಹೂತು ಹಾಕಿದ್ದನ್ನು ನಾವೂ ನೋಡಿದ್ದು, ಜಾಗ ತೋರಿಸುತ್ತೇವೆ ಎಂದು ಹೇಳಿದ್ದಾರೆ.






