ರಾಜಕೀಯ

ದುಡ್ಡಿನ ದರ್ಪ, ಅಹಂಕಾರದಿಂದ ಗೋಬ್ಯಾಕ್ ಶೋಭಾ ಅಭಿಯಾನ 

Views: 53

ಚಿಕ್ಕಮಗಳೂರು:  ದುಡ್ಡಿನ ದರ್ಪದಿಂದ, ಅಹಂಕಾರದಿಂದ ಗೋಬ್ಯಾಕ್ ಶೋಭಾ ಅಭಿಯಾನ ಮಾಡಿಸಿದ್ದಾರೆ. ಕಳೆದ ಚುನಾವಣೆಯಲ್ಲೂ ಮಾಡಿಸಿದ್ದರು. ಇದಕ್ಕೆ ಹೈಕಮಾಂಡ್ ಸರಿಯಾದ ಉತ್ತರ ಕೊಡುತ್ತದೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಕೃಷಿ ಮತ್ತು ರಾಜ್ಯ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಗುಡುಗಿದರು.

ಸೋಮವಾರ ನಗರದಲ್ಲಿ ಸುದ್ದಿ ಗಾರರ ಜತೆ ಮಾತನಾಡಿ, ನನ್ನ ವಿರುದ್ದ ಕಳೆದ ಚುನಾವಣೆ ಯಲ್ಲಿ ಗೋಬ್ಯಾಕ್ ಮಾಡಿದ್ದರು. ಈ ಚುನಾವಣೆಯಲ್ಲೂ ಮಾಡಿದ್ದಾರೆ. ವ್ಯವಸ್ಥಿತವಾಗಿ ಮಾಡಿದ್ದಾರೆ. ಮಾಡಿಸುತ್ತಿದ್ದಾರೆ. ಹೈಕಮಾಂಡ್ ನನಗೆ ಯಾವ ಜವಬ್ದಾರಿ ನೀಡಿದೆ ಪ್ರಾಮಾಣಿಕ ವಾಗಿ, ಕಪ್ಪು ಚುಕ್ಕೆ ಬಾರದಂತೆ ರಾಜಕೀಯ ಮಾಡಿದ್ದೇನೆ. ಯಾರು ಷಡ್ಯಂತ ಮಾಡಿದರು. ಉತ್ತರ ನಾನು ಕೊಡಲ್ಲ ಹೈಕಮಾಂಡ್, ಹಿರಿಯರು ಕೊಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

ಪತ್ರ ಯಾರು ಬರೆದರು, ಯಾರದ್ದು ಹ್ಯಾಂಡ್ ರೈಟಿಂಗ್ ಬರೆದರ, ಯಾರು ಪೋಸ್ಟ್‌ ಮಾಡಿದರು, ಎಷ್ಟು ಪೋಸ್ಟ್‌ ಮಾಡಿದರು. ಇದೆಲ್ಲದರ ಬಗ್ಗೆ ಕೇಂದ್ರ ಕೂಡ ವರದಿ ತರಿಸಿ ಕೊಂಡಿದೆ. ಸತ್ಯ ಕೇಂದ್ರದವರಿಗೆ ತಿಳಿದಿದೆ ಎಂಬ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ನಲ್ಲಿ ಏನು ನಡೆಯುತ್ತಿದೆ ಎಂದು ಅವರಿಗೆ ಗೊತ್ತಿದೆ. ಅವರ ಎಂಎಲ್ ಎಗಳನ್ನು ಉಳಿಸಿಕೊಳ್ಳಲು ಆಗಲ್ಲ ಎಂದು ಬಿಜೆಪಿ ಎಂಎಲ್ ಎಗಳನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಆದ ಮೇಲೆ ಎಲ್ಲವೂ ಆಚೆ ಬರುತ್ತದೆ. ಕಾಂಗ್ರೆಸ್ ಆಂತರಿಕ ರಾಜಕೀಯದ ಬಗ್ಗೆ ನಾನು ಕಮೆಂಟ್ ಮಾಡಲ್ಲ, ಮುಖ್ಯಮಂತ್ರಿ, ಉಪ ಮುಖ್ಯ ಮಂತ್ರಿಗಳ ನಡುವೆ ಏನು ನಡೆಯುತ್ತಿದೆ ಎಂದು ಚುನಾವಣೆ ಬಳಿಕ ಆಚೆಗೆ ಬರುತ್ತದೆ ಎಂದರು.

Related Articles

Back to top button