ಜ.28 ಕ್ಕೆ ಅಮಾಸೆಬೈಲು ವಲಯ ಶೆಟ್ಟಿಗಾರ್ (ಪದ್ಮಶಾಲಿ) ಸಮಾಜ ಸೇವಾ ಸಂಘ ವಾರ್ಷಿಕೋತ್ಸವ

Views: 117
ಕುಂದಾಪುರ: ಅಮಾಸೆಬೈಲು ವಲಯ ವ್ಯಾಪ್ತಿಯ ಶೆಟ್ಟಿಗಾರ (ಪದ್ಮಶಾಲಿ) ಸಮಾಜ ಸೇವಾ ಸಂಘದ 7ನೇ ವಾರ್ಷಿಕ ಮಹಾಸಭೆ ಜನವರಿ 28ಕ್ಕೆ ಬೆಳಿಗ್ಗೆ 9:30 ರಿಂದ ಶಂಕರನಾರಾಯಣ ಹಾಲು ಡೈರಿಯ ‘ಕ್ಷೀರ ಸಭಾಭವನ’ ದಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು ಇದರ ಅಧ್ಯಕ್ಷರಾದ ರಾಮದಾಸ್ ಶೆಟ್ಟಿಗಾರ್ ಪಣಿಯಾಡಿ, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು ಕಾರ್ಯದರ್ಶಿ ಎಸ್.ತಿಮ್ಮಪ್ಪ ಶೆಟ್ಟಿಗಾರ ಮುದ್ರಾಡಿ, ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಜಯರಾಮ ಶೆಟ್ಟಿಗಾರ, ಬಸ್ರೂರು ಪದ್ಮಶಾಲಿ ಕ್ರಿಯಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿಗಾರ್, ಅಮಾಸೆಬೈಲು ಪದ್ಮಶಾಲಿ ವಲಯ ಸಂಘದ ಗೌರವ ಸಲಹೆಗಾರ ಹಾಗೂ ಉಪನ್ಯಾಸಕ ಪುರುಷೋತ್ತಮ ಶೆಟ್ಟಿಗಾರ್, ಕನ್ನಡ ಕರಾವಳಿ ಸಂಪಾದಕ ಹಾಗೂ ಉಪನ್ಯಾಸಕ ಸುಧಾಕರ ವಕ್ವಾಡಿ, ಅಮಾಸೆಬೈಲು ವಲಯ ಸಂಘದ ಸ್ಥಾಪಕ ಅಧ್ಯಕ್ಷ ಹಂಚಿಕಟ್ಟೆ ಮಂಜುನಾಥ್ ಶೆಟ್ಟಿಗಾರ್ ಭಾಗವಹಿಸಲಿದ್ದಾರೆ. ಅಪರಾಹ್ನ 1 ಗಂಟೆಯಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಶ್ರೀ ಕರುಣಾಕರ ಶೆಟ್ಟಿಗಾರ ಬಳ್ಮನೆ ಮತ್ತು ಪ್ರಧಾನ ಸಂಘಟನಾ ಕಾರ್ಯದರ್ಶಿ ಅಶ್ವಿನ್ ಕುಮಾರ್ ಶಂಕರನಾರಾಯಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.