ಚೈತ್ರಾ ಕುಂದಾಪುರ ಮೆಹಂದಿ ಕಾರ್ಯಕ್ರಮ ಜೋರು, 12 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಮದುವೆ ರೆಡಿ!

Views: 384
ಕನ್ನಡ ಕರಾವಳಿ ಸುದ್ದಿ: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಫೈರ್ ಬ್ರ್ಯಾಂಡ್ ಅಂತಲೇ ಫೇಮಸ್ ಆಗಿರೋ ಚೈತ್ರಾ ಕುಂದಾಪುರ ಮೇ 9ಕ್ಕೆ ಮದುವೆ ನಡೆಯಲಿದೆ. ಈಗ ಚೈತ್ರಾ ಕುಂದಾಪುರ ಅವರ ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೀಗಾಗಿ ಚೈತ್ರಾ ಕುಂದಾಪುರ ಅವರ ಭಾವಿ ಪತಿಯನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಆದ್ರೆ ಇಲ್ಲಿಯವರೆಗೂ ಚೈತ್ರಾ ಕುಂದಾಪುರ ತಮ್ಮ ಭಾವಿ ಪತಿಯನ್ನು ಪರಿಚಯ ಮಾಡಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಚೈತ್ರಾ ಕುಂದಾಪುರ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ಮದುವೆ ಕಾರ್ಯಕ್ರಮದಲ್ಲಿ ಬ್ಯುಸಿ ಇರೋ ಚೈತ್ರಾ ಅವರ ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ.
ಇನ್ನೂ, ಚೈತ್ರಾ ಕುಂದಾಪುರ ಅವರ ಮದುವೆ ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ. ಮನ ಮೆಚ್ಚಿದ ಹುಡುಗನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಕಿರುತೆರೆ ನಟ ನಟಿಯರು ಸೇರಿದಂತೆ ಹಲವಾರು ಗಣ್ಯರನ್ನು ಚೈತ್ರಾ ಕುಂದಾಪುರ ಅವರು ಆಹ್ವಾನಿಸಿದ್ದಾರೆ.
ಹುಡುಗ ಯಾರು?
ಚೈತ್ರಾ ಕುಂದಾಪುರ ನಾಳೆ (ಮೇ 9) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆಂದು ವರದಿಯಾಗಿದೆ. ಸುಮಾರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆಂದು ಹೇಳಲಾಗಿದೆ. ಆದರೆ, ತಾವು ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಇಲ್ಲೂ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಚೈತ್ರಾ ತಮ್ಮ ಮದುವೆಗೆ ಕೇವಲ ತಮ್ಮ ಕುಟುಂಬಸ್ಥರಿಗೆ, ಆಪ್ತರಿಗೆ ಹಾಗೂ ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿಗಳು ಹಾಗೂ ಬಾಯ್ಸ್ Vs ಗರ್ಲ್ಸ್ ಶೋನ ಸ್ನೇಹಿತರಿಗಷ್ಟೇ ಆಹ್ವಾನ ನೀಡಿದ್ದಾರೆಂದು ಹೇಳಲಾಗುತ್ತಿದೆ.