ಇತರೆ
ಚುಲ್ಲಕ ಕಾರಣಕ್ಕೆ ಗಂಡ- ಹೆಂಡತಿ ಜಗಳ: ಬೇಸತ್ತು ಹೊಂಡಕ್ಕೆ ಹಾರಿದ ಪತ್ನಿ, ರಕ್ಷಿಸಲು ಹೋದ ಪತಿಯೂ ಸಾವು

Views: 1
ಗಂಡ ಹೆಂಡತಿಯ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳದಿಂದ ಬೇಸತ್ತು ಮಹಿಳೆಯೊಬ್ಬರು ಹೊಂಡಕ್ಕೆ ಹಾರಿದ್ದು, ಆಕೆಯನ್ನು ರಕ್ಷಿಸಲು ಹೋದ ಪತಿಯೂ ಸಾವನಪ್ಪಿದ ಘಟನೆ ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ ನಡೆದಿದೆ. ಮೃತರನ್ನು ಯಶೋದ ,(32) ಹಾಗೂ ಇಮ್ಯಾನುವಲ್ (40) ಎಂದು ಗುರುತಿಸಲಾಗಿದೆ.
ದಂಪತಿಗಳ ಸಾವಿನಿಂದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ದಂಪತಿಗಳು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದವರಾಗಿದ್ದು, ತೋಟದ ಕೆಲಸಕ್ಕಾಗಿ ಕಾರ್ಕಳದ ನಲ್ಲೂರಿಗೆ ಬಂದು ವಾಸವಾಗಿದ್ದಾರೆ.ಪ್ರಕರಣ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.