ಆರೋಗ್ಯ

ಚಿಕ್ಕಮಗಳೂರು: ಮಂಗನ ಕಾಯಿಲೆ ಸೋಂಕಿಗೆ ಮತ್ತೋರ್ವ ಮಹಿಳೆ ಸಾವು

Views: 19

ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಸೋಂಕಿಗೆ ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದಾರೆ.

ಕೊಟ್ರಮ್ಮ (43), ಕಾಯಿಲೆಗೆ ಬಲಿಯಾದ ಕಾರ್ಮಿಕ ಮಹಿಳೆ. ಕೊಪ್ಪ ತಾಲೂಕಿನ ನುಗ್ಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವಗನ್​ ಎಸ್ಟೇಟ್​ನಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಳು. ಜ್ವರ, ಸುಸ್ತು, ಉಸಿರಾಟದ ಸಮಸ್ಯೆಯಿಂದ ಮಹಿಳೆ ಬಳಲುತ್ತಿದ್ದಳು.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಕಳೆದ ಸೋಮವಾರ ಮಹಿಳೆಯ ರಕ್ತದ ಹಾಗೂ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಕೊಪ್ಪ ಹಾಗೂ ಎನ್​.ಆರ್.ಪುರದಲ್ಲಿ ಮತ್ತೆ 6 ಮಂದಿಗೆ KFD ಸೋಂಕು ದೃಢಪಟ್ಟಿದೆ.

Related Articles

Back to top button