ರಾಜಕೀಯ
ಚಿಕ್ಕಮಗಳೂರಿನಲ್ಲಿ ಕೋಟಾ ಶ್ರೀನಿವಾಸ ಪೂಜಾರಿಗೆ ಚುನಾವಣಾ ಖರ್ಚಿಗಾಗಿ 25 ಸಾವಿರ ರೂ. ಹಣ ನೀಡಿದ ಚುರುಮುರಿ ವ್ಯಾಪಾರಿ!

Views: 66
ಚಿಕ್ಕಮಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಚುನಾವಣಾ ಖರ್ಚಿಗಾಗಿ ಚುರುಮುರಿ ವ್ಯಾಪಾರಿಯೊಬ್ಬರು 25,000 ರೂ ದೇಣಿಗೆ ನೀಡಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತ ಹಾಗೂ ಚುರುಮುರಿ ವ್ಯಾಪಾರಿಯೋರ್ವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ 25,000 ಹಣ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ ಚಿಕ್ಕಮಗಳೂರು ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ ಪ್ರಚಾರಕ್ಕೆಂದು ಹೋದಾಗ ಚಿಕ್ಕಮಗಳೂರು ಹೊರವಲಯದ ತೇಗೂರು ಸರ್ಕಲ್ ನಲ್ಲಿನ ಚುರುಮುರಿ ವ್ಯಾಪಾರಿ ಲೊಕೇಶ್ ಬಾಬು ಅವರು ಕೋಟಾಗೆ 25 ಸಾವಿರ ಹಣವನ್ನು ಚುನಾವಣಾ ಖರ್ಚಿಗಾಗಿ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ. ಹಣದ ಜೊತೆ ಎಲೆ-ಅಡಿಕೆ-ಬಾಳೆಹಣ್ಣು ಸೇರಿ ವಿವಿಧ ಹಣ್ಣುಗಳನ್ನು ನೀಡಿ ಚುನಾವಣೆಗೆ ಶುಭಕೋರಿದ್ದಾರೆ.