ಕರಾವಳಿ

ಈದುಲ್ ಫಿತ್ರ್ ಆಚರಣೆ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಗೆ ಡಿಸಿ ಸಾರ್ವತ್ರಿಕ ರಜೆ ಘೋಷಣೆ

Views: 131

ಕನ್ನಡ ಕರಾವಳಿ ಸುದ್ದಿ: ಶುಕ್ರವಾರ ಈದುಲ್ ಫಿತ್ ಹಬ್ಬವು ಆಚರಿಸುವುದರಿಂದ ಜಿಲ್ಲೆಯಾದ್ಯಂತ ಮಾ. 20ರ ಶುಕ್ರವಾರ ಸಾರ್ವತ್ರಿಕ ರಜೆ ಸಾರಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುರುವಾರ ಯುಗಾದಿ ರಜೆಯಿದ್ದು, ಸಾರ್ವತ್ರಿಕ ರಜೆ ಹಿನ್ನೆಲೆಯಲ್ಲಿ ಶುಕ್ರವಾರವೂ ಶಾಲಾ ಕಾಲೇಜು, ಸರಕಾರಿ ಕಚೇರಿಗಳಿಗೆ ರಜೆಯಿರಲಿದೆ.

ನಮಾಜ್ ಮತ್ತು ಸಂಭ್ರಮಾಚರಣೆ: ಶುಕ್ರವಾರ ಬೆಳಗ್ಗೆ ಜಿಲ್ಲೆಯ ಪ್ರಮುಖ ಮಸೀದಿಗಳಲ್ಲಿ ವಿಶೇಷ ಈದ್ ನಮಾಜ್ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ಒಂದೆಡೆ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಪರಸ್ಪರ ಹಸ್ತಲಾಘವ ಮಾಡಿ, ಆಲಿಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.

Related Articles

Back to top button
error: Content is protected !!