ಜನಮನ
ಕೋಟ ಪ್ರತಿಷ್ಠಿತ ಶ್ರೀ ಶಾಂತಿಮತೀ ಪುರಸ್ಕಾರಕ್ಕೆ ಬಿ.ಕೆ ಲಕ್ಷ್ಮೀ ನಾರಾಯಣ ಭಟ್ಟ ಆಯ್ಕೆ

Views: 28
ಕೋಟ: ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕವಾಗಿ ಗುರುತಿಸಿಕೊಂಡ ಬ್ರಹ್ಮಾವರದ ಶ್ರೀ ಶಾಂತಿಮತೀ ಪ್ರತಿಷ್ಠಾನ ಸಂಸ್ಥೆ ಪ್ರತಿವರ್ಷ ವಾರ್ಷಿಕೋತ್ಸವದಲ್ಲಿ ನೀಡುವ ಶ್ರೀ ಶಾಂತಿಮತೀ ಪುರಸ್ಕಾರ- 2024 ಪುರಸ್ಕಾರಕ್ಕೆ ಶೃಂಗೇರಿಯ ಋಗ್ವೇದ ಸಲಕ್ಷಣ ಘನಪಾಠಿ ಬಿ.ಕೆ ಲಕ್ಷ್ಮೀ ನಾರಾಯಣ ಭಟ್ಟ ಇವರನ್ನು ಆಯ್ಕೆಮಾಡಲಾಗಿದೆ.
ವಾರ್ಷಿಕೋತ್ಸವ ಕಾರ್ಯಕ್ರಮ ಇದೇ ಬರುವ ಜನವರಿ 11 ರಂದು ಕೋಟದಲ್ಲಿ ಜರಗಲಿದ್ದು, ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕೈಂಕರ್ಯ ನೆರವೆರಿಸಿ ಅಪರಾಹ್ನ ಮಾಂಗಲ್ಯ ಮಂದಿರದಲ್ಲಿ ಈ ಪುರಸ್ಕಾರ ಸಮಾರಂಭ ನೆರವೇರಲಿದೆ.ಎಂದು ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ವಡ್ಡರ್ಸೆ ಸಚ್ಚಿದಾನಂದ ಅಡಿಗ ಮಾಜಿ ಅಧ್ಯಕ್ಷ ವಿಜಯ ಮಂಜರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






