ಇತರೆ

ಕೋಟ: ಕಾರು ಡಿಕ್ಕಿಯಾಗಿ ಸೈಕಲ್ ಸವಾರ ಸಾವು

Views: 126

ಕೋಟ: ಕಾರು ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಡಿ.14 ರಂದು ಶನಿವಾರ ಸಂಜೆ ಕೋಟ ಗೊಬ್ಬರಬೆಟ್ಟು ಬೆಲ್ಲದ ಗಣಪತಿ ದೇವಸ್ಥಾನ ಬಳಿ ಸಂಭವಿಸಿದೆ.

ಸಾಲಿಗ್ರಾಮ ಬಡಾ ಹೋಳಿ ನಿವಾಸಿ ಮುಣೂರು ಜನತಾ ವಿಶ್ ಮಿಲ್ ನ ಉದ್ಯೋಗಿ ಸುರೇಶ್ ಮರಕಾಲ (48) ಮೃತಪಟ್ಟವರು

ಸೈಕಲ್ ಸವಾರ ಸುರೇಶ್ ಅವರು ಜನತಾ ಫಿಶ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿ ಕೋಟದಿಂದ ಸಾಲಿಗ್ರಾಮಕ್ಕೆ ಮನೆಗೆ ಸೈಕಲ್ ನಲ್ಲಿ ಹೋಗುತ್ತಿದ್ದ ಸಂದರ್ಭ ಮುರ್ಡೇಶ್ವರದಿಂದ ಬೆಂಗಳೂರು ಹೋಗುತ್ತಿದ್ದ  ಕಾರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಸೈಕಲ್ ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಿಂದ ತೀವ್ರವಾಗಿ ಗಾಯಗೊಂಡ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಅವರು ತಾಯಿ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!