ಆರೋಗ್ಯ
ಕೋಟೇಶ್ವರ ಶಿವಪುರ ಕ್ಲಿನಿಕ್ ವೈದ್ಯೆ ಡಾ.ಮೋಹಿನಿ ಆಚಾರ್ಯ ನಿಧನ

Views: 492
ಕುಂದಾಪುರ: ಕೋಟೇಶ್ವರ ಬಸ್ ನಿಲ್ದಾಣದ ಹತ್ತಿರ ಇರುವ ಶಿವಪುರ ಕ್ಲಿನಿಕ್ ಖ್ಯಾತ ವೈದ್ಯೆ ಡಾ. ಮೋಹಿನಿ ಆಚಾರ್ಯ( 70) ಇಂದು ಬೆಳಿಗ್ಗೆ ಸೋಡಿಯಂ ಕೊರತೆಯಿಂದ ನಿಧನರಾದರು.
ಮೃತರ ಪತಿ ಡಾ. ಎಸ್ ಪಿ ಆಚಾರ್ಯ ಇಬ್ಬರು ಪುತ್ರರರು ಪುತ್ರಿಯನ್ನು ಅಗಲಿದ್ದಾರೆ.
ಕೋಟೇಶ್ವರದಲ್ಲಿ ಹೆಸರಾಂತ ವೈದ್ಯರಾಗಿದ್ದು ಅಂದಿನ ಕಾಲದಲ್ಲಿ ಸರಿಯಾದ ರಸ್ತೆ, ವಾಹನ ಸೌಲಭ್ಯ ಇಲ್ಲದೆ ಇರುವ ಕಾಲದಲ್ಲಿ ಇಲ್ಲಿನ ಹತ್ತಾರು ಗ್ರಾಮಗಳ ಮನೆ ಮನೆಗಳಿಗೆ ತಾವೇ ತೆರಳಿ ಔಷಧಿ ನೀಡಿ ಅದೇಷ್ಟೋ ಜೀವವನ್ನು ಉಳಿಸಿದ್ದಾರೆ.ಅಲ್ಲದೆ ಮನೆಯಲ್ಲಿಯೇ ಹೆರಿಗೆಯನ್ನು ಮಾಡಿಸುತ್ತಿದ್ದರು. ರೋಗಿಗಳಿಗೆ ಬೇಕಾಗಿರುವ ಎಲ್ಲಾ ಔಷಧಗಳನ್ನು ತಮ್ಮ ಮನೆಯಲ್ಲಿಯೇ ತಯಾರಿಸುತ್ತಿದ್ದರು.
ಇವರ ಮಾನವೀಯ, ಪ್ರೀತಿಯ ಸೇವೆ ಹಾಗೂ ಆಪತ್ಕಾಲದ ವೈದ್ಯೆ ಅಗಲಿಕೆಯ ವಿಷಯ ಕೇಳಿ ಜನರು ಕಂಬನಿ ಮಿಡಿದಿದ್ದಾರೆ