ಇತರೆ

ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಸ್ನಾನಕ್ಕೆ ತೆರಳಿದ ವ್ಯಕ್ತಿ ಕಾಲು ಜಾರಿ ಬಿದ್ದು ಸಾವು 

Views: 168

ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು  ಸಾವನ್ನಪಿದ ಘಟನೆ ಆಗಸ್ಟ್ 7ರಂದು  ಸಂಭವಿಸಿದೆ.

ಕೊಲ್ಲೂರು ನಿವಾಸಿ, ನರಸಿಂಹ ಬಾಳಿಗ ಅವರ ಪುತ್ರರಾಗಿರುವ ನಟೇಶ್ ಬಾಳಿಗ (36) ಮೃತಪಟ್ಟವರು.

ಪಶ್ಚಿಮ ಘಟ್ಟ ತಪ್ಪಲುಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗಳೆಲ್ಲವೂ ಉಕ್ಕಿ ಹರಿಯುತ್ತಿವೆ ನೀರಿನ ಸೆಳೆತವು ಜಾಸ್ತಿಯಾಗಿದೆ. ಗುರುವಾರ ಬೆಳಿಗ್ಗೆ ನದಿಯಲ್ಲಿ ಸ್ನಾನ ಮಾಡುವಾಗ ಈ ಘಟನೆ ನಡೆದಿದೆ. ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ವ್ಯಕ್ತಿಯ ಮೃತ ದೇಹವು ಮಾವಿನಕಾರು ಸೇತುವೆ ಸಮೀಪ ನದಿಯಲ್ಲಿ ಪತ್ತೆಯಾಗಿದೆ.

ನಟೇಶ್ ಅವರು ದೇವಸ್ಥಾನದ ವಾಹನಗಳ ನಿಲುಗಡೆ ಪರಿಸರದಲ್ಲಿ ತಿಂಡಿ ಅಂಗಡಿ ನಡೆಸುತ್ತಿದ್ದರು.ಅವಿವಾಹಿತರಾಗಿದ್ದ ಅವರು ತಂದೆ ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Related Articles

Back to top button
error: Content is protected !!