ಕೇದಾರ ಮರವಂತೆಗೆ ಯುವ ಚೇತನ ಪ್ರಶಸ್ತಿ ಪ್ರದಾನ

Views: 151
ಬೈಂದೂರು: ಸಿಟಿ ಜೇಸೀಸ್ ಸೋಮವಾರ ಮರವಂತೆಯಲ್ಲಿ ಆಯೋಜಿಸಿದ್ದ ಯುವ ದಿನಾಚರಣೆಯಲ್ಲಿ ಮರವಂತೆ ಯುವ ಸಂಗೀತ ಪ್ರತಿಭೆ ಕೇದಾರ ಮರವಂತೆ ಇವರಿಗೆ ಯುವಚೇತನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಂಟು ವರ್ಷಗಳಿಂದ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿರುವ ಕೇದಾರ ಈಚೆಗೆ ಪುಣೆಯಲ್ಲಿ ನಡೆದ ಸದ್ಗುರು ಜಗಜೀತ್ ಸಿಂಗ್ ಶಾಸ್ತ್ರೀಯ ಸಂಗೀತ ಪ್ರತಿಯೋಗಿತಾ ಮತ್ತು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಲಾ ಉತ್ಸವದಲ್ಲಿ ಭಾಗಿಯಾಗಿದ್ದರು. ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಇವರು ಜತೀಂದ್ರ ಮರವಂತೆ ಮತ್ತು ಡಾ. ರೂಪಶ್ರೀ ದಂಪತಿಯ ಪುತ್ರ. ಜೇಸಿ ಅಧ್ಯಕ್ಷೆ ಅನಿತಾ ಆರ್. ಕೆ. ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯದರ್ಶಿ ಗಣೇಶ ಪೂಜಾರಿ, ಜೊತೆ ಕಾರ್ಯದರ್ಶಿ ಗುಲಾಬಿ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ ಖಾರ್ವಿ, ಡಾ. ರೂಪಶ್ರೀ, ಎಸ್. ಜನಾರ್ದನ, ಜೇಸಿ ಸ್ಥಾಪಕಾಧ್ಯಕ್ಷರು, ಪೂರ್ವಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಇದ್ದರು.