ಕುಂದಾಪುರ: ಹಿಂಸಾತ್ಮಕವಾಗಿ ಜಾನುವಾರು ಸಾಗಾಟ, ಚಾಲಕ ಸಹಿತ ವಾಹನ ವಶಕ್ಕೆ
Views: 129
ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಅಮಾಸೆಬೈಲು ಎಂಬಲ್ಲಿ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟಾ ಮಾಡುತ್ತಿರುವಾಗ ಪೊಲೀಸರು ಚಾಲಕ ಸಹಿತ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಜೀವನ್.ಕೆ. ಅವರೊಂದಿಗೆ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಹುಲಿಕಲ್ ಘಾಟಿ ಕಡೆಯಿಂದ ಚೆಕ್ ಪೊಸ್ಟ್ ಕಡೆಗೆ ಬರುತ್ತಿದ್ದ ವಾಹನವನ್ನು ನೋಡಿ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಎರಡು ವಾಹನದ ಹಿಂದುಗಡೆ ಬಾಡಿಯಲ್ಲಿ ಎರಡು ಜಾನುವಾರುಗಳಿಗೆ ಹಿಂಸ್ಮಾಕವಾಗಿ ಕಟ್ಟಿ ಹಾಕಿ ತುಂಬಿರುವುದು ಕಂಡು ಚಾಲಕನಲ್ಲಿ ಈ ಬಗ್ಗೆ ವಿಚಾರಿಸಲಾಗಿ ಸದ್ರಿ ಜಾನುವಾರುಗಳನ್ನು ಯಾವುದೇ ದಾಖಲೆ ಇಲ್ಲದೆ ನಾವುಂದ ತೌಫೀಕ ಅಬ್ದುಲ್ ಸಾಹೇಬರ ಫಾರಂ ಹೌಸಗೆ ಕೊಂಡು ಹೋಗುತ್ತಿರುವುದಾಗಿ ವಾಹನದಲ್ಲಿದ್ದವರು ತಿಳಿಸಿರುತ್ತಾರೆ.
ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೊಂಡು ಹೋಗುತ್ತ್ತಿದ್ದುದರಿಂದ ಅವರ ತಪ್ಪಿತ್ವದ ತಿಳುವಳಿಕೆ ನೀಡಿ ಸದ್ರಿ ಜಾನುವಾರು ಅವುಗಳನ್ನು ತಂದ ವಾಹನ ಸಮೇತ ವಾಹನದಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






