ಇತರೆ

ಕುಂದಾಪುರ: ತ್ರಾಸಿಯಲ್ಲಿ ಮನೆಯಿಂದ ಚಿನ್ನಾಭರಣ ಕಳ್ಳತನ :ದಂಪತಿಯ ಸೆರೆ

Views: 361

ಕನ್ನಡ ಕರಾವಳಿ ಸುದ್ದಿ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಏಳೇ ಗಂಟೆ ಯಲ್ಲಿ ಸರಿ ಹಿಡಿಯುವಲ್ಲಿ ಗಂಗೊಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಂದಾಪುರ ತಾಲೂಕಿನ ತ್ರಾಸಿ ಬೀಚ್ ಬಳಿಯ ಉದಯ ಪೂಜಾರಿ ಎಂಬವರ ಮನೆಯಲ್ಲಿ ಬ್ಯಾಗ್‌ನಲ್ಲಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್-1, 16 ಗ್ರಾಂ ತೂಕದ ಬಳೆ-1 ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರವನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಕುಂದಾಪುರ ಗುಜ್ಜಾಡಿ ನಿವಾಸಿ ವಿನಾಯಕ (41) ಹಾಗೂ‌ ಆತನ ಪತ್ನಿ ಪ್ರಮೀಳಾ(30) ಎಂಬಾಕೆಯನ್ನು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತರಿಂದ ಕಳವು ಮಾಡಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್-1, 16 ಗ್ರಾಂ ತೂಕದ ಬಳೆ-1 ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರ ಸಹಿತ ಒಟ್ಟು 2 ಲಕ್ಷ ಮೌಲ್ಯದಆಭರಣ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್‌ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ತಂಡಕ್ಕೆ ಎಸ್ಪಿ ಡಾ.ಅರುಣ್ ಕೆ, ಎ ಎಸ್ ಟಿ.ಎಸ್. ಪರಮೇಶ್ವರ ಹೆಗಡೆ, ಕುಂದಾಪುರ ಡಿವೈಎಸ್ಪಿ ಎಚ್ ಡಿ ಕುಲಕರ್ಣಿ ಮಾರ್ಗದರ್ಶನ ಮಾಡಿದ್ದರು.

Related Articles

Back to top button