ಜನಮನ
ಕುಂದಾಪುರ ಕ್ರೆಡಿಟ್ ಕಾರ್ಡ್ ನಿಂದ ಲಕ್ಷಾಂತರ ರೂ.ವಂಚನೆ

Views: 121
ಕುಂದಾಪುರ: ಆನ್‌ಲೈನ್ ಮೂಲಕ ಅಪರಿಚಿತರು ಕ್ರೆಡಿಟ್ ಕಾರ್ಡ್ ವಿವರ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಕುಂದಾಪುರದ ಹಂಗಳೂರಿನಲ್ಲಿ ನಡೆದಿದೆ.
ವಂಚನೆಗೊಳಗಾದ ಹಂಗಳೂರಿನ ಪ್ರತಾಪ್ ಅವರು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಅವರಿಗೆ ಗೂಗಲ್‌ನಿಂದ ರಿವಾರ್ಡ್ ಪಾಯಿಂಟ್ ಲಿಂಕ್ ಬಂದಿದ್ದು ಅದನ್ನು ತೆರೆದ ಅವರು ಕ್ರೆಡಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಲು ತಿಳಿಸಿದ್ದಾರೆ.ಅದನ್ನು ಭರ್ತಿಮಾಡಿ ಕೇವಲ 15 ನಿಮಿಷಗಳಲ್ಲೇ ಕ್ರೆಡಿಟ್ ಕಾರ್ಡ್ ಖಾತೆಯಿಂದ ಮೊದಲಿಗೆ 98 ಸಾವಿರ ರೂ. ಕಳೆದುಕೊಂಡರು. ಅನಂತರ 1.14 ಲಕ್ಷ ರೂ.ಗಳನ್ನು ಅಪರಿಚಿತರು ಅವರ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.