ಶಿಕ್ಷಣ

ಕಳೆದ 5 ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡದ ಮಂಗಳೂರು ವಿಶ್ವವಿದ್ಯಾನಿಲಯ   

Views: 28

ಮಂಗಳೂರು: ಅತಿಥಿ ಉಪನ್ಯಾಸಕರಿಗೆ, ಕಳೆದ 5 ತಿಂಗಳಿಂದ ಮಂಗಳೂರು ವಿಶ್ವವಿದ್ಯಾನಿಲಯ ಸಂಬಳ ನೀಡದ ಕುರಿತು ಧರಣಿ ಕೂತಿದ್ದ ಸ್ಥಳಕ್ಕೆ ಸಂಸದ ಪ್ರತಾಪ್‌ ಸಿಂಹ ಭೇಟಿ ನೀಡಿ ಸಂಬಳವನ್ನು ಕೊಡಿಸುವ ಭರವಸೆ ಕೊಟ್ಟಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ 62 ಜನ ಅತಿಥಿ ಉಪನ್ಯಾಸಕರಿದ್ದು, ಕಳೆದ 5 ತಿಂಗಳಿಂದ ಮಂಗಳೂರು ವಿಶ್ವವಿದ್ಯಾನಿಲಯ ಅವರಿಗೆ ಸಂಬಳವನ್ನು ನೀಡಿರುವುದಿಲ್ಲ,ಹಾಗಾಗಿ ಸ್ಥಳಕ್ಕೆ ಭೇಟಿ ಕೊಟ್ಟು ರಿಜಿಸ್ಟ್ರಾರ್ ರವರಿಗೆ ಮಾತನಾಡಿ ಡಿಸೆಂಬರ್ ವರೆಗಿನ ಸಂಬಳವನ್ನು ಮುಂದಿನ ವಾರದೊಳಗೆ ನೀಡಲು ಹಾಗೂ ಧರಣಿ ಕೂತಿದ್ದ ದಿನದ್ದು ಹಾಜರಾತಿಯನ್ನು ತೆಗೆದುಕೊಳ್ಳಲು ಸೂಚನೆ ಕೊಟ್ಟು. ಏಪ್ರಿಲ್ ಮೊದಲ ವಾರದೊಳಗೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನ ಸಂಬಳವನ್ನು ಕೊಡುವುದಾಗಿ ರಿಜಿಸ್ಟ್ರಾರ್ ಭರವಸೆ ಕೊಟ್ಟಿದ್ದಾರೆ ಎಂದಿದ್ದಾರೆ

Related Articles

Back to top button