ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ: ವರಮಹಾಲಕ್ಷ್ಮೀ ಆಚರಣೆ

Views: 207
ಕನ್ನಡ ಕರಾವಳಿ ಸುದ್ದಿ: ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಸಂತೆಕಟ್ಟೆ ಇಲ್ಲಿ ಜುಲೈ 8ರಂದು ಶುಕ್ರವಾರ ಸಾಯಂಕಾಲ ಗಂಟೆ 3:30 ರಿಂದ 6:30ರ ವರೆಗೆ ಶ್ರೀ ಆದಿಶಕ್ತಿ ಪದ್ಮಶಾಲಿ ಮಹಿಳಾ ವೇದಿಕೆಯ ವತಿಯಿಂದ ವರಮಹಾಲಕ್ಷ್ಮಿ ಪೂಜೆಯು ನೆರವೇರಿಸಲ್ಪಟ್ಟಿತು.
ಈ ಪೂಜೆಯ ಪೌರೋಹಿತ್ಯವನ್ನು ಶ್ರೀಯುತ ಸಂತೋಷ್ ಬಾಯರಿ ಮತ್ತು ಶ್ರೀಯುತ ರಾಘವೇಂದ್ರ ಭಟ್ ಇವರುಗಳು ನಡೆಸಿಕೊಟ್ಟರು. ಪ್ರಾರಂಭದಲ್ಲಿ ಶ್ರೀ ವೀರಭದ್ರನ ಸನ್ನಿಧಾನದಲ್ಲಿ ಪ್ರಾರ್ಥನೆಯನ್ನು ನಡೆಸುವ ಮೂಲಕ ವರಮಹಾಲಕ್ಷ್ಮಿ ಪೂಜೆಗೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಲಾಯಿತು. ಪೂಜಾ ನಂತರದಲ್ಲಿ ಮುಖ್ಯ ಪುರೋಹಿತರಾದ ಸಂತೋಷ ಬಾಯರಿಯವರು ವರಮಹಾಲಕ್ಷ್ಮಿ ವ್ರತದ ಮಹತ್ವವನ್ನು ತಿಳಿಸಿ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಉದ್ದಕ್ಕೂ ಮಹಿಳಾ ವೇದಿಕೆಯ ಸದಸ್ಯರಿಂದ ಭಜನೆಯು ನಡೆಯುತ್ತಿತ್ತು. ಭಾಗವಹಿಸಿದ ಎಲ್ಲಾ ಮುತ್ತೈದೆಯರಿಗೆ ಪವಿತ್ರದಾರ, ಅರಶಿನ, ಕುಂಕುಮ, ಹಸಿರು ಬಳೆ ಮುಂತಾದವುಗಳನ್ನು ವಿತರಿಸಲಾಯಿತು.
ಈ ದೇವತಾ ಕಾರ್ಯಕ್ರಮದಲ್ಲಿ ದೇವಸ್ಥಾನದ ಪ್ರಧಾನ ಮೊಕ್ತೇಸರರಾದ ಶ್ರೀಯುತ ಕೆ ಜ್ಯೋತಿ ಪ್ರಸಾದ ಶೆಟ್ಟಿಗಾರ್, ಆಡಳಿತ ಮಂಡಳಿ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು, ಯುವ ವೇದಿಕೆಯ ಪದಾಧಿಕಾರಿಗಳು, ಮಹಿಳಾ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀಮತಿ ಶೋಭಾ ಜ್ಯೋತಿಪ್ರಸಾದ್ ಶೆಟ್ಟಿಗಾರ್ , ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ರಾಮ ಶೆಟ್ಟಿಗಾರ್, ಕಾರ್ಯದರ್ಶಿ, ಶ್ರೀಮತಿ ಜಯ ಎಮ್ ಶೆಟ್ಟಿಗಾರ್, ಕೋಶಾಧಿಕಾರಿ ಶ್ರೀಮತಿ ಶೋಭಾ ರಾಣಿ , ಶ್ರೀಮತಿ ಮಾನಸ ಅಖಿಲೇಶ್, ಶ್ರೀಮತಿ ಸರೋಜಿನಿ ಯಶವಂತ್ ಶೆಟ್ಟಿಗಾರ ಮುಂತಾದ ಮಹಿಳಾ ವೇದಿಕೆಯ ಪದಾಧಿಕಾರಿಗಳ ಸಹಿತ 300ಕ್ಕೂ ಹೆಚ್ಚು ಮಾತೆಯರು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಭಕ್ತಾದಿಗಳಿಗೂ ಪ್ರಸಾದ ವಿತರಣೆಯ ನಂತರ, ಉಪಹಾರದ ವ್ಯವಸ್ಥೆಯನ್ನು ಶ್ರೀಮತಿ ಹೇಮಾಕ್ಷಿ ಪ್ರಭಾಕರ ಶೆಟ್ಟಿಗಾರ ಚಿಟ್ಪಾಡಿ ಇವರ ವತಿಯಿಂದ ಮಾಡಲಾಗಿತ್ತು.






