ರಾಜಕೀಯ

“ಒಂದು ದೇಶ ಒಂದು ಚುನಾವಣೆ” ರಾಷ್ಟ್ರಪತಿಗೆ ವರದಿ

Views: 30

ದೆಹಲಿ: ಒಂದು ದೇಶ ಒಂದು ಚುನಾವಣೆ  ನಡೆಸುವ ಕುರಿತು ಸಾಕಷ್ಟು ಪರ ವಿರೋಧದ ಚರ್ಚೆ ನಡೆಯುತ್ತಿರುವಾಗಲೇ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವರದಿಯೊಂದನ್ನು ಸಲ್ಲಿಸಿದೆ.

2023 ರ ಸೆಪ್ಟಂಬರ್ 2 ರಂದು ರಚಿಸಲಾಗಿದ್ದ ಸಮಿತಿ ಏಳು ತಿಂಗಳಿನಲ್ಲಿ ಹಲವು ತಜ್ಞರ ಜೊತೆ ಸಮಾಲೋಚನೆ ಮಾಡಿ ವರದಿಯನ್ನು ತಯಾರಿಸಿದೆ. 18626 ಪುಟಗಳ ವರದಿಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಿದ್ದಾರೆ.

ದೇಶದ ಹಲವು ರಾಜ್ಯಗಳಲ್ಲಿ ನಡೆಯುವ ಚುನಾವಣೆಯನ್ನು ಪರಿಗಣಿಸಿದ್ರೆ ವರ್ಷಕ್ಕೆ 200 ಕ್ಕೂ ಹೆಚ್ಚು ದಿನಗಳ ಕಾಲ ದೇಶದಲ್ಲಿ ಚುನಾವಣೆಗಳು ನಡೆಯುತ್ತಿರುತ್ತದೆ. ಅದು ಸ್ಥಳಿಯಾಡಳಿತ ಚುನಾವಣೆಗಳಿಂದ ಹಿಡಿದು ರಾಜ್ಯ ವಿಧಾನಸಭಾ ಚುನಾವಣೆಗಳನ್ನೂ ಒಳಗೊಂಡಿದೆ. ಇದರಿಂದ ಹಣ, ಸಮಯ, ಹಾಗೂ ಅದಕ್ಕಾಗಿ ಕೆಲಸ ಮಾಡುವ ನೌಕರರ ಶ್ರಮವನ್ನು ಪರಿಗಣಿಸಿ ಒಂದು ದೇಶ ಒಂದು ಚುನಾವಣೆಯ ಆಲೋಚನೆ ಮಾಡಲಾಗಿದೆ. ಪ್ರಮುಖವಾಗಿ ಇಡೀ ದೇಶದಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಯ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವುದು ಮತ್ತು ಈ ಚುನಾವಣೆ ನಡೆದ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಈ ಒನ್ ನೇಷನ್ ಒನ್ ಎಲೆಕ್ಷನ್‌ ಉದ್ದೇಶವಾಗಿದೆ.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಆಜಾದ್, ಹಣಕಾಸು ಆಯೋಗದ ಮಾಜಿ ನಿರ್ದೇಶಕ ಎನ್‌.ಕೆ.ಸಿಂಗ್ ಹಾಗೂ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಶ್.ಸಿ.ಕಶ್ಯಪ್ ಅವರುಗಳ ಸಮಿತಿಯನ್ನು ನೇಮಿಸಲಾಗಿತ್ತು.

ಈ ಸಮಿತಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಚುಣಾವಣಾ ಆಯೋಗದ ಮಾಜಿ ಮುಖ್ಯಸ್ಥರುಗಳನ್ನು ಹಾಗೂ ಸಂವಿಧಾನದ ತಜ್ಞರುಗಳ ಅಭಿಪ್ರಾಯ ಸಂಗ್ರಹಿಸಿದೆ. ಈ ವರದಿಯನ್ನು ಇದೀಗ ರಾಷ್ಟ್ರಪತಿಯವರಿಗೆ ಸಲ್ಲಿಕೆಯಾಗಿದೆ.

Related Articles

Back to top button