ಜನಮನ
ಐಪಿಎಲ್ ಬೆಟ್ಟಿಂಗ್ ನಲ್ಲಿ ಕೋಟ್ಯಾಂತರ ಸಾಲ ಮಾಡಿಕೊಂಡಿದ್ದ ಪತಿ:ಮನನೊಂದು ಪತ್ನಿ ಆತ್ಮಹತ್ಯೆ

Views: 95
ಚಿತ್ರದುರ್ಗ: ಬೆಟ್ಟಿಂಗ್ ಕಾನೂನು ಬಾಹಿರ ಆದರೂ ಪತಿಯ ಐಪಿಎಲ್ ಬೆಟ್ಟಿಂಗ್ನಿಂದ 1.5 ಕೋಟಿ ರೂಪಾಯಿ ಸಾಲಮಾಡಿ ಕೊಂಡಿದ್ದರು.ಈ ವಿಚಾರವಾಗಿ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೊಳಲ್ಕೆರೆ ಪೊಲೀಸರು 13 ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಗಿರೀಶ್, ಶಿವು, ವೆಂಕಟೇಶ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಪತಿ ದರ್ಶನ್ ಬಾಬು ಐಪಿಎಲ್ ಬೆಟ್ಟಿಂಗ್ ನಲ್ಲಿ ಸುಮಾರು 1.5 ಕೋಟಿ ಸಾಲ ಮಾಡಿದ್ದರು. 1 ಕೋಟಿಗೂ ಹೆಚ್ಚು ಹಣ ಮರುಪಾವತಿ ಮಾಡಿದ್ದರು. ಇನ್ನೂ ಸುಮಾರು 54 ಲಕ್ಷ ಸಾಲ ಉಳಿಸಿಕೊಂಡಿದ್ದರು. ಆರೋಪಿಗಳು ಹಣ ಕೊಡದಿದ್ದರೆ ಮಾನ ಹರಾಜು ಹಾಕುವ ಬೆದರಿಕೆ ಒಡ್ಡಿದ್ದರಿಂದ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.