ಧಾರ್ಮಿಕ

ಎ.14 ರಂದು ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು “ಅಷ್ಟ ಪವಿತ್ರ ನಾಗಮಂಡಲೋತ್ಸವ”

Views: 20

ಕುಂದಾಪುರ: ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು, ಕನ್ಯಾನ ಗ್ರಾಮದ ಶ್ರೀ ನಾಗದೇವರ ಸನ್ನಿಧಿಯಲ್ಲಿ ಎ.14 ರಂದು ಅಷ್ಟ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ.

ದಿನಾಂಕ 10.04.2024 ಬುಧವಾರದಿಂದ 13,04.2024 ಶನಿವಾರದವರೆಗೆ ಶಾಖಲ ಯಕ್ಸಂಹಿತಾ ಯಾಗವು ನಾಗಮಂಡಲೊತ್ಸವದ ಪ್ರಯುಕ್ತ ನಡೆಯಲಿದೆ.

ದಿನಾಂಕ 13.4. 2024 ನೇ ಶನಿವಾರ ಸರ್ಪಸಂಸ್ಕಾರ, ಪಂಚಗವ್ಯ ಆಯುತ ಸಂಖ್ಯಾ ತಿಲಾ ಹೋಮ, ದಶದಾನ, ಗೋದಾನ, ವಟು ಬ್ರಾಹ್ಮಣ ಆರಾಧನೆ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಮಂಡಲ ಮಂಟಪದಲ್ಲಿ ವಾಸ್ತು ಪೂಜಾ, ರಾಕ್ಷೋಘ್ನ ಹೋಮ, ದಿಗ್ಬಲಿ, ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಉದ್ಯಾಪನಾ ಹೋಮ, ಶಾಕಲ ಋಕ್ಸಂಹಿತಾ ಯಾಗದ ಪೂರ್ಣಾಹುತಿಯು ನೆರವೇರಲಿದೆ.

ಮಧ್ಯಾಹ್ನ 12:30 ಕ್ಕೆ ಅನ್ನ ಸಂತರ್ಪಣೆ

ದಿನಾಂಕ 14. 4. 2024ನೇ ರವಿವಾರ ಬೆಳಿಗ್ಗೆ 7ಕ್ಕೆ ಫಲ ಸಮರ್ಪಣೆ, ಗುರು ಗಣಪತಿ ಪೂಜೆ, ಪುಣ್ಯಾ ವಾಚನ, ಮಧುಪರ್ಕ ಪೂಜೆ, ಷಣ್ಯಾರಿಕೇಳ ಗಣಯಾಗ, ನವಗ್ರಹ ಹೋಮ, ದುರ್ಗಾ ಹೋಮ, ತಿಲ ಹೋಮ, ಕೂಷ್ಮಾಂಡ ಹೋಮ, ಪವಮಾನ ಹೋಮ, ಸುಬ್ರಹ್ಮಣ್ಯ ಹೋಮ, ತತ್ವ ಹೋಮ, ಅಷ್ಟೋತ್ತರ ಶತ ಪರಿಕಲಶ ಸಹಿತ ಬ್ರಹ್ಮ ಕಲಶ ಸ್ಥಾಪನೆ, ಸರ್ಪಸೂಕ್ತ ಹೋಮ, ಅದಿವಾಸ ಹೋಮ, ಚತುರ್ವೇದ ಪಾರಾಯಣ, ಗಾಯತ್ರಿ ಜಪ, ಮೂಲ ಮಂತ್ರ ಜಪ, ನಾಗಯಕ್ಷಿ ದೇವರಿಗೆ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ.

ಬೆಳಿಗ್ಗೆ 10:30 ಕ್ಕೆ ನಾಗದರ್ಶನ, ತೀರ್ಥ ಪ್ರಸಾದ ವಿತರಣೆ.

ಮಧ್ಯಾಹ್ನ 12.00 ರಿಂದ ಮಹಾ ಅನ್ನಸಂತರ್ಪಣೆ.

ಸಂಜೆ 7ಕ್ಕೆ ಹಾಲಿಟ್ಟು ಸೇವೆ, ದೇವರ ದರ್ಶನ

ರಾತ್ರಿ 9:00 ರಿಂದ ಅಷ್ಟ ಪವಿತ್ರ ನಾಗಮಂಡಲೋತ್ಸವ

ನಂತರ ಪ್ರಸಾದ ವಿತರಣೆ, ಮಂತ್ರಾಕ್ಷತೆ.

ದಿನಾಂಕ 14. 4 .2024ರ ರವಿವಾರ ಸಂಜೆ 5 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ

ಆಶೀರ್ವಚನ :ಶ್ರೀ ಶ್ರೀ ವಿದ್ಯಾವಾಚಸ್ಪತಿ ಡಾ. ವಿಶ್ವ ಸಂತೋಷ ಭಾರತಿ ಶ್ರೀಪಾದರು. ಶ್ರೀ ಬಾರ್ಕೂರು ಮಹಾಸಂಸ್ಥಾನ

ಅಧ್ಯಕ್ಷರು: ಶ್ರೀ ಬಿ ಅಪ್ಪಣ್ಣ ಹೆಗಡೆ ಆಡಳಿತ ಧರ್ಮದರ್ಶಿಗಳು. ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು.

ಉದ್ಘಾಟನೆ :ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುಖ್ಯ ಪ್ರಬಂಧಕರು ಅನ್ನಪೂರ್ಣ ಛತ್ರ ಶ್ರೀ ಕ್ಷೇತ್ರ ಧರ್ಮಸ್ಥಳ,

ಘನ ಉಪಸ್ಥಿತಿ: ಶ್ರೀ ಸಚ್ಚಿದಾನಂದ ಚಾತ್ರ ಅನುವಂಶಿಕ ಆಡಳಿತ ಮೊಕ್ತೇಸರರು. ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಕಮಲಶಿಲೆ.

ಶ್ರೀ ದುಗ್ಗೇಗೌಡ ಪ್ರಾದೇಶಿಕ ನಿರ್ದೇಶಕರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ( ರಿ) ಬಿ ಸಿ ಟ್ರಸ್ಟ್ ಉಡುಪಿ ಜಿಲ್ಲೆ

ಶ್ರೀ ಕೃಷ್ಣಮೂರ್ತಿ ಮಂಜರು ಅಧ್ಯಕ್ಷರು ಎಂ.ಎಸ್ .ಚಾರಿಟೇಬಲ್ ಟ್ರಸ್ಟ್ ಚಿತ್ತೂರು, ಮಾರಣಕಟ್ಟೆ

ಶ್ರೀ ಗುರುರಾಜ್ ಸೋಮಯಾಜಿ ಪುರೋಹಿತರು ಮತ್ತು ತಂತ್ರಿಗಳು ಬ್ರಹ್ಮನಜಡ್ಡು, ನೇರಳಕಟ್ಟೆ. ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು.

ಮುಖ್ಯ ಅತಿಥಿಗಳು: ಶ್ರೀ ಟಿ ಬಾಲಕೃಷ್ಣ ಶೆಟ್ಟಿ ವಕೀಲರು ಕುಂದಾಪುರ.

ಶ್ರೀ ಗೋಕುಲ್ ದಾಸ್ ಬಾರ್ಕೂರು ಧರ್ಮದರ್ಶಿಗಳು ಶ್ರೀ ಮಾಲ್ತಿ ದೇವಿ ದೇವಸ್ಥಾನ ಹಾಗೂ ಶ್ರೀ ಬಬ್ಬು ಸ್ವಾಮಿ ಮೂಲ ಕ್ಷೇತ್ರ ಕಚ್ಚೂರು ಬಾರ್ಕೂರು,

ಶ್ರೀ ದಿನಕರ ಉಡುಪ ಜ್ಯೋತಿಷ್ಯರು ಹರವರಿ ಚಿತ್ತೂರು,

ಶ್ರೀ ವೈ ಶರತ್ ಕುಮಾರ್ ಶೆಟ್ಟಿ ವಕೀಲರು ಕುಂದಾಪುರ.

ಶ್ರೀ ರಾಜೇಂದ್ರ ಕುಮಾರ್ ಬಸ್ರೂರು, ಅಧ್ಯಕ್ಷರು: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕುಂದಾಪುರ ತಾಲೂಕು.

ಶ್ರೀ ರಾಜಗೋಪಾಲ ಆಚಾರ್ಯ ರಥಶಿಲ್ಪಿ ,ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕೋಟೇಶ್ವರ,

ಶ್ರೀ ಪ್ರಕಾಶ್ ಪೂಜಾರಿ ಗುಜ್ಜಾಡಿ ಮ್ಯಾನೇಜರ್ ಗ್ರೀನ್ಲ್ಯಾಂಡ್ ಟೈಲ್ಸ್ ಬೆಣಜಿನಗುಡ್ಡೆ ಗುಲ್ವಾಡಿ.

ಕಾರ್ಯಕ್ರಮ ನಿರೂಪಣೆ :ಸತೀಶ್ಚಂದ್ರ ಶೆಟ್ಟಿ ದೈಹಿಕ ಶಿಕ್ಷಣ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಪಾಡಿ.

ದಿನಾಂಕ 14. 4‌ 2024ರ ಪೂರ್ವಾಹ್ನ 11:30 ರಿಂದ 12:30 ತನಕ ಶ್ರೀ ಬಿ ರಾಜೇಂದ್ರ ಕುಮಾರ್ ಬಸ್ರೂರು ಇವರಿಂದ ಸುಗಮ ಸಂಗೀತ ಭಕ್ತಿ ಗಾಯನ

ಅಪರಾಹ್ನ 12:30 ರಿಂದ 2:30ರ ತನಕ ತೆಂಕು ಹಾಗೂ ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ “ಗಾನ ವೈಭವ”

ಸ್ಮಿತಾ ಬಾರ್ಕೂರ್ ಇವರಿಂದ ಭಕ್ತಿ ಲಹರಿ

ಅಪರಾಹ್ನ 2.30 ರಿಂದ 5:30ರ ತನಕ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ನೃತ್ಯ ರೂಪಕ “ಶ್ರೀದೇವಿ ವೈಭವ ಮತ್ತು ಬಿಡುವನೆ ಬ್ರಹ್ಮಲಿಂಗ”

ನೃತ್ಯ ವೈಭವ ದಕ್ಷ ಯಜ್ಞ ರಾಮಾಯಣ ದರ್ಶನಂ ದಾಸ ಕೀರ್ತನೆಗಳು

ಸರ್ವರನ್ನು ಆದರದಿಂದ ಸ್ವಾಗತಿಸುವ,

ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ (ರಿ) ಶ್ರೀ ಕ್ಷೇತ್ರ ಕೂಡ್ಲು ಬಾಡಬೆಟ್ಟು, ಕನ್ಯಾನ ಕುಂದಾಪುರ, ತಾಲೂಕು ಉಡುಪಿ ಜಿಲ್ಲೆ, ಹಾಗೂ ಊರ ಮತ್ತು ಪರವೂರ ಭಕ್ತಾಭಿಮಾನಿಗಳು

Related Articles

Back to top button