ಉಡುಪಿ: ಪಾರ್ಟ್ ಟೈಮ್ ಜಾಬ್ ಸಂದೇಶ, ರಿವಿವ್ಯ ಮಾಡಿ ಹೆಚ್ಚಿನ ಲಾಭಂಶದ ಆಸೆ ತೋರಿಸಿ ಆನ್ಲೈನ್’ನಲ್ಲಿ 43 ಲಕ್ಷ ವಂಚನೆ!

Views: 181
ಉಡುಪಿ: ಇತ್ತೀಚಿಗೆ ಜಿಲ್ಲೆಯಲ್ಲಿ ಆನ್ಲೈನ್ ಜಾಲದ ಮೋಸಕ್ಕೆ ಸಿಲುಕುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಮೋಸಕ್ಕೆ ಬಲಿಬಿದ್ದು ಲಕ್ಷ ಲಕ್ಷ ಕಳೆದುಕೊಳ್ಳುತ್ತಿದ್ದು ಇದೀಗ ಮತ್ತೊಂದು ಪ್ರಕರಣ ವರದಿಯಾಗಿದೆ.
ಪರ್ಕಳದ ಯತಿರಾಜ್ ಎಂಬುವವರು ಈ ಮೋಸದ ಜಾಲಕ್ಕೆ ಬಲಿ ಬಿದ್ದು 40 ಲಕ್ಷಕ್ಕಿಂತ ಅಧಿಕ ಹಣ ಕಳೆದುಕೊಂಡಿದ್ದಾರೆ.
ಟೆಲಿಗ್ರಾಂ ಆ್ಯಪ್ ನಲ್ಲಿ ಪಾರ್ಟ್ ಟೈಮ್ ಜಾಬ್ ಬಗ್ಗೆ ಸಂದೇಶ ಬಂದಿದ್ದು ರಿವಿವ್ಯ ಟಾಸ್ಕ್ ಮಾಡಿ ಹಣ ಗಳಿಸುವ ಬಗ್ಗೆ ಹಾಗೂ Socar ಎಂಬ ಆ್ಯಪ್ ನಲ್ಲಿ ಹಣ ಹೂಡಿಕೆಯಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಲಾಗಿದೆ.
ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ತಿಳಿಸಿದ್ದು ಅದರಂತೆ ಹಂತ ಹಂತವಾಗಿ ಒಟ್ಟು ರೂಪಾಯಿ 43,43,596/- ಹಣವನ್ನು ಪಾವತಿಸಿದ್ದಾರೆ.
ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೆ ಸಂತ್ರಸ್ಥರನ್ನು ವಂಚಿಸಿರುವ ಕುರಿತು ವರದಿಯಾಗಿದೆ.ಉಡುಪಿಯ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2024 ಕಲಂ: 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.