ಜನಮನ

ಉಡುಪಿ ಖಾಸಗಿ ಬಸ್ಸಿನಲ್ಲಿ ಚೆಕ್ಕಿಂಗ್ ಕೆಲಸ ಮಾಡುತ್ತಿರುವ ಸುಧೀಂದ್ರ ನಾಪತ್ತೆ 

Views: 2021

ಕನ್ನಡ ಕರಾವಳಿ ಸುದ್ದಿ: ಖಾಸಗಿ ಬಸ್ಸಿನಲ್ಲಿ ಚೆಕಿಂಗ್ (ಸಿಸಿಟಿ) ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸುಧೀಂದ್ರ ಬಿಳಿಯ ಅವರು ಎಂದಿನಂತೆ ದಿನಾಂಕ 04.12.2024 ರಂದು ಬೆಳಿಗ್ಗೆ 6 ಗಂಟೆಗೆ  ಕುಂದಾಪುರ ಕಸಬಾ ಗ್ರಾಮದ ವೆಸ್ಟ್ ಬ್ಲಾಕ್ ರಸ್ತೆಯಲ್ಲಿರುವ ಮನೆಯಿಂದ ಉಡುಪಿ ಸಿಸಿಟಿ ಕಚೇರಿಗೆ ಕೆಲಸಕ್ಕೆ ಹೋದವರು ಮನೆಗೆ ವಾಪಾಸು ಬಂದಿರುವುದಿಲ್ಲ, ದಿನಾಂಕ 5.12.2024 ರಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅವರು ಕೆಲಸ ಮಾಡುವ ಕಚೇರಿಗೆ  ಹೋಗದೆ ಈವರೆಗೆ ಮನೆಗೆ ಬಾರದೆ ಕಾಣೆಯಾಗಿದ್ದಾರೆ.

ಸುಧೀಂದ್ರ 40 ವರ್ಷ ಪ್ರಾಯ,  ಕಪ್ಪು ಬಿಳಿಯ ಚೌಕುಳಿಯ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಬಲಗೈ ಹಸ್ತದ ಮೇಲೆ ಆಂಜನೇಯ ದೇವರ ಟ್ಯಾಟೋ ಇದೆ. ಈ ಬಗ್ಗೆ ಮಾಹಿತಿ ಇದ್ದಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ವಿನಂತಿ, ಸಂಪರ್ಕ- 08254- 230338 ಕುಂದಾಪುರ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Related Articles

Back to top button
error: Content is protected !!