ಉಡುಪಿ ಕರಂಬಳ್ಳಿ ಕೆರೆಗೆ ಬಿದ್ದು ವಿದ್ಯಾರ್ಥಿ ಸಾವಿನ ಪ್ರಕರಣ: ಸ್ನೇಹಿತರ ಮೇಲೆ ಸಂಶಯ?

Views: 155
ಉಡುಪಿ: ಇಲ್ಲಿನ ಕರಂಬಳ್ಳಿಯ ಕೆರೆಗೆ ಬಿದ್ದು ಲಕ್ಷ್ಮೀಂದ್ರ ನಗರದ ನಿವಾಸಿ ವಿದ್ಯಾರ್ಥಿ ಸಿದ್ದಾರ್ಥ ಶೆಟ್ಟಿ ಸಾವಿನ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.
ಈ ಪ್ರಕರಣದ ಹಿಂದೆ ಆತನ ಜೊತೆಗಿದ್ದ ಸ್ನೇಹಿತರ ಕೈವಾಡದ ಬಗ್ಗೆ ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದ ದಿನ ಆತನ ಜೊತೆಗಿದ್ದ ಸ್ನೇಹಿತರಾದ ಶಾಶ್ವತ್ ಶೆಟ್ಟಿ, ಹಾರ್ದಿಕ್ ಶೆಟ್ಟಿ, ದರ್ಶನ್ ಪೂಜಾರಿ ಮೇಲೆ ಅನುಮಾನ ವ್ಯಕ್ತವಾಗಿದ್ದು, ಹಾರ್ದಿಕ ಹಾಗೂ ದರ್ಶನ್ ಪೂಜಾರಿ ಬೇರೆ ಬೇರೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾರೆ ಈ ಮೂವರು ವಿದ್ಯಾರ್ಥಿಗಳು ಸಿದ್ದಾರ್ಥನ ಆತ್ಮೀಯ ಗೆಳೆಯರಲ್ಲ ಎಂದು ತಿಳಿದುಬಂದಿದೆ.
ಶಾಶ್ವತ್ ಶೆಟ್ಟಿ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದು, ಬ್ರಹ್ಮಾವರ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಅಂದು ದರ್ಶನ್ ಜೊತೆ ಸ್ಕೂಟರ್ ನಲ್ಲಿ ಸಿದ್ದಾರ್ಥ್ ಹೋಗಿದ್ದರು ಆತನನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂಬುವುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ ಸಿದ್ದಾರ್ಥನಿಗೆ ಈಜು ಬರುವುದಿಲ್ಲ ಎಂಬುವುದು ಸ್ನೇಹಿತರಿಗೆ ತಿಳಿದಿದ್ದರೂ ಆತನ ರಕ್ಷಣೆಗೆ ಮುಂದಾಗಲಿಲ್ಲ ಈ ಕಾರಣದಿಂದ ಈ ಪ್ರಕರಣದಲ್ಲಿ ಶಾಶ್ವತ್ ಶೆಟ್ಟಿ ಕೈವಾಡದ ಬಗ್ಗೆ ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿ ಸಮಗ್ರ ತನಿಖೆಗೆ ಅಗ್ರಹಿಸಿದ್ದಾರೆ.