ಇತರೆ

ಉಡುಪಿ: ಅಂಬಲಪಾಡಿ ಹೆದ್ದಾರಿ ಮೇಲ್ಸೇತುವೆ ಬೃಹತ್ ಹೊಂಡಕ್ಕೆ ಮಗುಚಿ ಬಿದ್ದ ಕಾರು

Views: 229

ಉಡುಪಿ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಬೃಹತ್ ಹೊಂಡಕ್ಕೆ ಮಗುಚಿ ಬಿದ್ದ ಘಟನೆ ಉಡುಪಿಯ ಅಂಬಲಪಾಡಿ ಜಂಕ್ಷನ್ ನಲ್ಲಿ ಇಂದು(ಡಿ.27) ರಂದು   ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಐದು ಮಂದಿ ಪ್ರಯಾಣಿಕರು ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಬಹೃತ್ ಹೊಂಡ ಅಗೆಯಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ಈ ಹೊಂಡಕ್ಕೆ ಮಗುಚಿ ಬಿದ್ದಿದೆ.

ಹೊಂಡಕ್ಕೆ ಕಾರು ಮಗುಚಿಬಿದ್ದು ಸಂಭವಿಸಿದ ಮೊದಲ ಅಪಘಾತವಾಗಿದೆ. ಮುಂದೆ ಇನ್ನಷ್ಟು ಅಪಘಾತಗಳು ಸಂಭವಿಸುವುದನ್ನು ತಡೆಯಲು ಹೊಂಡದ ಸುತ್ತ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Articles

Back to top button
error: Content is protected !!