ಧಾರ್ಮಿಕ
ಉಡುಪಿ:ಮಲ್ಪೆಯಲ್ಲಿ ಕೆಂಡ ಸೇವೆಯಂದು ಆಯತಪ್ಪಿ ಬೆಂಕಿಗೆ ಬಿದ್ದ ಅಯ್ಯಪ್ಪ ಮಾಲಾಧಾರಿ

Views: 232
ಉಡುಪಿ: ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವದ ಕೆಂಡ ಸೇವೆ ವೇಳೆ ಅಯ್ಯಪ್ಪ ಮಾಲಾಧಾರಿಯೊಬ್ಬ ಬೆಂಕಿಗೆ ಬಿದ್ದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.
ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವದ ಕೆಂಡ ಸೇವೆಯು ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ, ಸಂಭ್ರಮದಿಂದ ನಡೆಯುತ್ತಿತ್ತು. ಸಾಂಪ್ರದಾಯಿಕವಾಗಿ ಮಾಲಾಧಾರಿಗಳು ಕೆಂಡದ ಮೇಲೆ ನಡೆದುಕೊಂಡು ಹೋಗಲು ಆರಂಭಿಸಿದರು.ಮೊದಲು ಒಬ್ಬ ಮಾಲಾಧಾರಿ ಚೆನ್ನಾಗಿಯೇ ಕೆಂಡದ ಮೇಲೆ ನಡೆದುಕೊಂಡು ಹೋಗಿದ್ದಾರೆ. ಬಳಿಕ ಮತ್ತೊಬ್ಬ ಮಾಲಾಧಾರಿ ಕೆಂಡದ ಮೇಲೆ ಓಡಿ ಬರುತ್ತಿದ್ದಂತೆ ನೆಲಕ್ಕೆ ಎಡವಿ ನೇರವಾಗಿ ಬಂದು ಕೆಂಡದ ಮೇಲೆ ಬಿದ್ದಿದ್ದಾರೆ. ಮಾಲಾಧಾರಿ ಆಯತಪ್ಪಿ ಕೆಂಡದ ಮೇಲೆ ಬೀಳುತ್ತಿದ್ದಂತೆ ಉಳಿದ ಮಾಲಾಧಾರಿಗಳೆಲ್ಲರೂ ಓಡಿ ಬಂದು ಅವರನ್ನು ಮೇಲೆತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.