ಸಾಂಸ್ಕೃತಿಕ

ಆಸ್ತಿಗೋಸ್ಕರ ದೊಡ್ಡ ಮಗಳ ಕುತಂತ್ರ.. ಚೈತ್ರಾ ಕುಂದಾಪುರ ತಂದೆ ಆರೋಪಕ್ಕೆ ತಾಯಿ ರೋಹಿಣಿ ತಿರುಗೇಟು

Views: 370

ಕನ್ನಡ ಕರಾವಳಿ ಸುದ್ದಿ:  ಚೈತ್ರಾ ಕುಂದಾಪುರ ಮೇಲೆ ಅವರ ತಂದೆ ಬಾಲಕೃಷ್ಣ ನಾಯ್ಕ್  ಆರೋಪದ ಹಿಂದೆ ದೊಡ್ಡ ಮಗಳ ತಂತ್ರ ಎಂದು  ಅವರ ತಾಯಿ ರೋಹಿಣಿ ಹೇಳಿಕೆ ಕೊಟ್ಟಿದ್ದಾರೆ.

ನನ್ನ ಪತಿ ಜವಾಬ್ದಾರಿ ಇಲ್ಲದ ವ್ಯಕ್ತಿ. ಮನೆಯ ಯಾವ ಕಷ್ಟಕ್ಕೂ ಸ್ಪಂದಿಸಿದವರಲ್ಲ. ದೊಡ್ಡ ಮಗಳು ಹೇಳಿಕೊಟ್ಟದ್ದನ್ನು ಅವರು ಹೇಳುತ್ತಿದ್ದಾರೆ. ಅವರು ಯಾವ ಮನೆಯ ಜವಾಬ್ದಾರಿಯನ್ನು ತೆಗೆದುಕೊಂಡ ವ್ಯಕ್ತಿಯಲ್ಲ.ಕೆಲಸ ಮಾಡುತ್ತೇನೆ ಎಂದು ಎಲ್ಲೆಲ್ಲಿ ಹೋಗುತ್ತಾರೆ ದುಡಿದ ಹಣವನ್ನು ದೊಡ್ಡ ಮಗಳಿಗೆ ತಂದು ಕೊಡುತ್ತಾರೆ. ನನ್ನ ದೊಡ್ಡ ಮಗಳು ಆಸ್ತಿಗೋಸ್ಕರ ತಂದೆಗೆ ಈ ರೀತಿ ಮಾತನಾಡಲು ಹೇಳಿಕೊಟ್ಟಿದ್ದಾಳೆ.

ನನ್ನ ಗಂಡನಿಗೆ ಮಾತನಾಡಲು ಬರುವುದಿಲ್ಲ ಅವರು ಒಂದು ರೀತಿಯ ಮಾನಸಿಕ ಖಿನ್ನತೆಯ ವ್ಯಕ್ತಿ. ರಾತೋರಾತ್ರಿ ಮನೆ ಬಿಟ್ಟು ಹೋಗುತ್ತಾರೆ. ಕೆಲವೊಮ್ಮೆ ಏನು ಮಾತನಾಡುತ್ತಾರೆ ಅನ್ನೋದೇ ಗೊತ್ತಾಗಲ್ಲ.

ನಮ್ಮ ಭೂಮಿ ಬೇಕು ಎಂದು ದೊಡ್ಡ ಮಗಳು ಬೆನ್ನು ಬಿದ್ದಿದ್ದಾಳೆ. ಅವಳ ಮನೆಗೆ ಸಹಾಯ ಮಾಡಲು ಚೈತ್ರಾ ಜಾಗ ಬರೆದುಕೊಟ್ಟಿದ್ದಾಳೆ. 25 ಲಕ್ಷ ಲೋನ್ ನಾವೇ ಮಾಡಿಕೊಟ್ಟಿದ್ದೇವೆ.

ದೊಡ್ಡ ಮಗಳು ಅಪ್ಪನ ಬಳಿ ಸಹಿ ಪಡೆದು ಜಾಗ ಒಳ ಹಾಕುವ ಸಂಚು ಮಾಡಿದ್ದಾಳೆ. ಅಮ್ಮ ಮೋಸ ಮಾಡಿದಳು ಎಂದು ಹೇಳಿಕೊಂಡು ಬರುತ್ತಿದ್ದಾಳೆ. ಅಪ್ಪ ಮದುವೆಗೆ ಬರದ ಹಾಗೆ ದೊಡ್ಡ ಮಗಳು ತಡೆದಿದ್ದಾಳೆ. ಕುಂದಾಪುರದವರೆಗೆ ಬಂದವರನ್ನು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ನಮ್ಮ ಮರ್ಯಾದೆ ತೆಗೆಯಲು ಈ ರೀತಿ ಮಾಡಿದ್ದಾಳೆ.

ಚೈತ್ರಾ ಕುಂದಾಪುರ ಅವರ ಪತಿ 12 ವರ್ಷದಿಂದ ನಮ್ಮ ಮನೆಯಲ್ಲಿ ಇರಲಿಲ್ಲ. ಎರಡು ಮೂರು ವರ್ಷದ ಹಿಂದೆ ನಮಗೆ ಅವನ ಪರಿಚಯವಾಗಿತ್ತು. ಅವನು ನಮ್ಮ ಮನೆಗೆ ಬಂದು ನೀರು ಸಹ ಕುಡಿಯುತ್ತಿರಲಿಲ್ಲ. ನಾನೇ ಹೆಣ್ಣು ಮಕ್ಕಳನ್ನು ಬೆಳೆಸಿದ್ದು. ಏನಾದರೂ ಹೇಳಿದರೆ ಹೊಡೆಯಲು ಬರುತ್ತಾರೆ. ಜಬರ್ದಸ್ತ್ ಮಾಡುತ್ತಾರೆ. ಇದನ್ನೆಲ್ಲ ನೋಡಿ ನೋಡಿ ನಮಗೆ ಸಾಕಾಗಿ ಅವರ ವಿಷಯ ಬಿಟ್ಟಿದ್ದೇವೆ ಎಂದು ರೋಹಿಣಿ ತಿಳಿಸಿದ್ದಾರೆ.

Related Articles

Back to top button