ಕರಾವಳಿ
ಆರ್ಕಿಟೆಕ್ಟ್ ಇಂಜಿನಿಯರ್ ತೆಕ್ಕಟ್ಟೆ ವಿಜೇತ್ ಟಿ.ಕೆ ನಿಧನ

Views: 123
ಕುಂದಾಪುರ: ಮೂಡುಬಿದಿರೆಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಚಿತ್ರಕಲಾ ಶಿಕ್ಷಕ ದಿವಂಗತ ಟಿ.ಕೆ ಆಚಾರ್ಯ ತೆಕ್ಕಟ್ಟೆ ಅವರ ಪುತ್ರ ಆರ್ಕಿಟೆಕ್ಟ್ ಇಂಜಿನಿಯರ್ ವಿಜೇತ ಟಿಕೆ (37) ಅವರು ಹೃದಯಾಘಾತದಿಂದ ಮಾರ್ಚ್ 4ರಂದು ಬೆಂಗಳೂರಿನಲ್ಲಿ ನಿಧನರಾದರು.
ತಾಯಿ ವೇದಾವತಿ ಟಿ.ಕೆ ಸೇರಿದಂತೆ ಅಪಾರ ಅಭಿಮಾನಿಗಳನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಭಾರತೀಯ ವಾಸ್ತು ಪರಂಪರೆ ಹಾಗೂ ಪಾಶ್ಚಾತ್ಯ ವಾಸ್ತು ಕಲೆಯ ಬಗ್ಗೆ ಅಪಾರ ಅನುಭವ ಹೊಂದಿದ್ದ ಅವರು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮದೇ ಖಾಸಗಿ ಸಂಸ್ಥೆ ಸ್ಥಾಪಿಸಿ, ಆಧುನಿಕ ತಂತ್ರಜ್ಞಾನ ಬಳಸಿ ವಾಸ್ತು ರಚನೆಗೆ ಪೂರಕವಾಗಿ ಸೃಜನಶೀಲತೆಯಿಂದ ರಚನಾತ್ಮಕ ನಕಾಶೆಗಳನ್ನು ಸಂಯೋಜಿಸುತ್ತಿದ್ದ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಉತ್ತಮ ಕುಂಚ ಕಲಾವಿದರಾಗಿದ್ದ ಅವರು ‘ಭ್ರಮೆ’ ಎನ್ನುವ ಕಿರು ಚಿತ್ರ ಸೇರಿದಂತೆ ಹಲವು ಆಲ್ಬಮ್ ಸಾಂಗ್ ಗಳಿಗೆ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.