ಇತರೆ
ಅಹಿಲ್ಯಾ ಪ್ರೇಮನಾಥ್ ಶೆಟ್ಟಿಗಾರ್ ನಿಧನ

Views: 229
ಕನ್ನಡ ಕರಾವಳಿ ಸುದ್ದಿ: ಮಹಾರಾಷ್ಟ್ರ ಸೋಲಾಪುರದ ನಿವಾಸಿ ಸುರತ್ಕಲ್ ನ ಕೃಷ್ಣ ಶೆಟ್ಟಿಗಾರ್ ಅವರ ಪುತ್ರಿ ಅಹಿಲ್ಯಾ ಪ್ರೇಮನಾಥ್ (71) ಜೂನ್ 8ರಂದು ಬೆಂಗಳೂರಿನಲ್ಲಿ ಪುತ್ರಿಯ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾದರು.
ಮೃತರು ಇಬ್ಬರು ಪುತ್ರಿಯರು, ಅಳಿಯ ಮೊಮ್ಮಗಳನ್ನು ಆಗಲಿದ್ದಾರೆ. ಹಲವಾರು ವರ್ಷಗಳಿಂದ ಮಹಾರಾಷ್ಟ್ರದ ಸೋಲಾಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಪತಿ ಪ್ರೇಮನಾಥ್ ಜೊತೆಯಲ್ಲಿದ್ದರು. ಪತಿ ತೀರಿಕೊಂಡ ನಂತರ ಇತ್ತೀಚೆಗೆ ಪುತ್ರಿಯೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಮೃತರ ಆತ್ಮ ಸದ್ಗತಿಗಾಗಿ ಜೂನ್ 19 ಮತ್ತು 20 ರಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.