ಜನಮನ
ಅರಸಿನ ಗುಂಡಿ ಫಾಲ್ಸ್ ಗೆ ಬಿದ್ದ ಯುವಕನ ಪತ್ತೆಗಾಗಿ ಮುಂದುವರಿದ ಹುಡುಕಾಟ…

Views: 0
ಭದ್ರಾವತಿಯ ಶರತ್ ಎನ್ನುವ ಯುವಕ ಒಂದು ತಿಂಗಳ ಹಿಂದೆಯಷ್ಟೇ ಹೊಸ ಕಾರನ್ನು ಖರೀದಿ ಮಾಡಿದ್ದ, ಹೊಸ ಕಾರಿನಲ್ಲಿ ಕೊಲ್ಲೂರಿಗೆ ಹೋಗುವುದಾಗಿ ಮನೆಯವರಿಗೆ ಹೇಳಿ ಭದ್ರಾವತಿಯಿಂದ ಬಂದಿದ್ದ ಶರತ್ ಕೊಲ್ಲೂರು ಸಮೀಪದ ಅರಶಿನ ಗುಂಡಿ ಪಾಲ್ಸ್ ನಿಂದ 7 ಕಿಲೋ ಮೀಟರ್ ವರೆಗೆ ಕಾಡು ದಾರಿಯಲ್ಲಿ ನಡೆದುಕೊಂಡು ಬಂದಿದ್ದ ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಜಲಪಾತಕ್ಕೆ ಬಿದ್ದು ಕೊಚ್ಚಿ ಹೋಗಿದ್ದ ಆತನ ಹುಡುಕಾಟದ ಕಾರ್ಯಾಚರಣೆ ಮುಂದುವರಿದಿದ್ದು, ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಲಪಾತದಲ್ಲಿ ನೀರಿನ ರಭಸ ಹೆಚ್ಚಾಗಿದ್ದು, ಅಗ್ನಿಶಾಮಕ ದಳ, ಪೊಲೀಸರು, ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದವರು ನಿರಂತರ ಹುಡುಕಾಟದಲ್ಲಿದ್ದಾರೆ ಮೃತದೇಹ ಇನ್ನೂ ಪತ್ತೆಯಾಗಿಲ್ಲ






