ಜನಮನ
ಅರಣ್ಯದಿಂದ ದಾರಿತಪ್ಪಿ ಪೇಟೆಗೆ ಬಂದ ಕಾಡಾನೆ ಸರೆ

Views: 202
ಕನ್ನಡ ಕರಾವಳಿ ಸುದ್ದಿ: ಅಭಯಾರಣ್ಯದಿಂದ ದಾರಿತಪ್ಪಿ ನಾಡಿಗೆ ಬಂದ ಕಾಡಾನೆ ಬಾಳೆಬರೆ ಘಾಟಿಯ ಮೂಲಕ ಸಿದ್ದಾಪುರದ ಪೇಟೆಗೆ ಬಂದ ಕಾಡಾನೆ ಕೊನೆಗೂ ಸೆರೆಯಾಗಿದೆ.
ಕಳೆದ ಎರಡು ದಿನಗಳಿಂದ ಆತಂಕ ಸೃಷ್ಟಿಸಿದ್ದ ಕಾಡಾನೆಯನ್ನು ಹೆನ್ನಾಬೈಲು ಸಮೀಪ ಸೆರೆಹಿಡಿಯಲಾಗಿದೆ.
ಕಾರ್ಯಾಚರಣೆಯಲ್ಲಿ ಸಕ್ರೆಬೈಲು, ನಾಗರಹೊಳೆ, ಮೈಸೂರು ಭಾಗದಿಂದ ಬಂದ ಆರಕ್ಕೂ ಹೆಚ್ಚು ಆನೆಗಳು ಸಾಥ್ ನೀಡಿವೆ. ಕೊನೆಗೂ ಕಾರ್ಯಚರಣೆ ಯಶಸ್ವಿಯಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಒಂಟಿ ಸಲಗಕ್ಕೆ ಹೆದರಿ ಜನರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ವಾರದ ಸಂತೆಯನ್ನು ರದ್ದುಗೊಳಿಸಲಾಯಿತು. ಸಿದ್ದಾಪುರ ಹೊಸಂಗಡಿ, ಎಡಮೊಗೆ, ಕಮಲಶಿಲೆ ಪರಿಸರದ ಶಾಲಾ-ಕಾಲೇಜಿಗೆ ಮುಂಜಾಗ್ರತಾಕ್ರಮವಾಗಿ ರಜೆ ಘೋಷಿಸಿದೆ.