ಸಾಂಸ್ಕೃತಿಕ

ಅಮೀರ್ ಖಾನ್ ಚಿತ್ರದಲ್ಲಿ ನಟಿಸಿದ್ದ ಬಾಲನಟಿ ಸುಹಾನಿ ದಿಢೀರ್ ಸಾವಿಗೆ ಕಾರಣವೇನು?

Views: 53

ಅಮೀರ್ ಖಾನ್ ನಟನೆಯ ದಂಗಲ್ ಚಿತ್ರದಲ್ಲಿ ಅಭಿನಯಿಸಿದ್ದ ಬಾಲ ನಟಿ ಸುಹಾನಿ ಭಟ್ನಾಗರ್ (19) ಮೃತಪಟ್ಟಿದ್ದಾರೆ. 2016ರಲ್ಲಿ ತೆರೆ ಕಂಡಿದ್ದ ಅಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿತ್ತು. ಇದೇ ಸಿನಿಮಾದಲ್ಲಿ ನಟಿಸಿದ್ದ ಬಾಲ ನಟಿ ಸುಹಾನಿ ಭಟ್ನಾಗರ್‌ ನಿಧನರಾಗಿದ್ದಾರೆ

ಅಮೀರ್ ಖಾನ್ ನಟನೆಯ ‘ದಂಗಲ್’ ಚಿತ್ರದಲ್ಲಿ ಆಮೀರ್‌ ಕಿರಿ ಮಗಳು ಬಬಿತಾ ಪಾತ್ರದಲ್ಲಿ ನಟಿ ಸುಹಾನಿ ಭಟ್ನಾಗರ್ ಅಭಿನಯಿಸಿದ್ದರು. ನಟನೆಯ ಜತೆಗೆ ಫ್ಯಾಷನ್‌ ಕಡೆಗೂ ಒಲವು ಬೆಳೆಸಿಕೊಂಡಿದ್ದಳು. ನೂರಾರು ಕನಸು ಕಟ್ಟಿಕೊಂಡಿದ್ದ ಮಗಳನ್ನು ಕಳೆದುಕೊಂಡ ನೋವಿನಲ್ಲಿ ಇಡೀ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದ

ಇತ್ತೀಚೆಗಷ್ಟೇ ಸುಹಾನಿ ಭಟ್ನಾಗರ್​ ಅಪಘಾತದಿಂದ ಅವರ ಕಾಲಿನ ಮೂಳೆ ಮುರಿದಿತ್ತು. ಹೀಗಾಗಿ ಅವರನ್ನು ಕಳೆದ ಕೆಲ ತಿಂಗಳಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಔಷಧಿ ಮಾತ್ರೆಗಳ ಸೈಡ್‌ ಎಫೆಕ್ಟ್‌ನಿಂದ ಸುಹಾನಿ ನಿಧನರಾಗಿದ್ದಾರೆ ಎನ್ನಲಾಗಿದೆ. ನಟಿಯ ದಿಢೀರ್​ ಸಾವಿಗೆ ಇಡೀ ಬಾಲಿವುಡ್​ ಮಂದಿ ಶಾಕ್​ ಆಗಿದ್ದಾರೆ.

 

 

Related Articles

Back to top button