ಅಣ್ಣ- ತಮ್ಮನಿಗೆ ರಾಖಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ಸಹೋದರಿ ಸಾವು!

Views: 283
ಹೈದರಾಬಾದ್: ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ಸಹೋದರರಿಗೆ ರಾಖಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾಳೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಡದ್ನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
17 ವರ್ಷದ ವಿದ್ಯಾರ್ಥಿನಿ ಕೋಡದ್ನ ನರಸಿಂಹುಲುಪೇಟೆಯ ಕಾಲೇಜೊಂದರಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜಿಗೆ ಹೋಗುವಾಗಲೇ ಯುವಕನೊಬ್ಬ ಹಿಂದೆ ಬಿದ್ದು ಪ್ರಪೋಸ್ ಮಾಡಿದ್ದನು. ಇದನ್ನು ವಿದ್ಯಾರ್ಥಿನಿ ಒಪ್ಪಿಕೊಂಡಿರಲಿಲ್ಲ. ಆದರೆ ಪದೇ ಪದೇ ಯುವಕ ಕಿರುಕುಳ ಕೊಡಲು ಆರಂಭಿಸಿದ್ದನು. ಇದರಿಂದ ಬೇಸತ್ತ ವಿದ್ಯಾರ್ಥಿನಿ ಕ್ರಿಮಿನಾಶಕ ಸೇವಿಸಿದ್ದಳು. ಈ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಕೆಯನ್ನು ಕೊಡದ್ನ ಆಸ್ಪತ್ರೆಗೆ ದಾಖಲು ಮಾಡಿದ್ದರು ಎಂದು ತಿಳಿದು ಬಂದಿದೆ.
ಆದರೆ ಯುವತಿ ನಾನು ಉಳಿಯುತ್ತಿನೋ ಇಲ್ಲವೋ ಎನ್ನುವ ಭಯದಲ್ಲಿ ವಿದ್ಯಾರ್ಥಿನಿ, ರಕ್ಷಾ ಬಂಧನ ಹಬ್ಬದ ಹಿನ್ನೆಯಲ್ಲಿ ಆಸ್ಪತ್ರೆಗೆ ತನ್ನ ಅಣ್ಣ-ತಮ್ಮನನ್ನ ಕರೆಯಿಸಿ ಇಬ್ಬರಿಗೂ ರಾಖಿ ಕಟ್ಟಿದ್ದಾಳೆ. ಸಹೋದರಿ ರಾಖಿ ಕಟ್ಟಿದ ಕೆಲವೇ ನಿಮಿಷದಲ್ಲಿ ಸಾವನ್ನಪ್ಪಿದ್ದಾಳೆ. ಇದರಿಂದ ಇಬ್ಬರು ಸಹೋದರರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.