ಇತರೆ

ಅಜ್ಜಿಯ ಸಾವಿಗೆ ಮರುಗಿದ ಕೋತಿ…ಮೃತ ದೇಹದ ಮೇಲೆ ಮಲಗಿ ರೋಧನೆ!

Views: 130

ಕನ್ನಡ ಕರಾವಳಿ ಸುದ್ದಿ: ಅಜ್ಜಿ ಮನೆ ಬಳಿ ಬರುತ್ತಿದ್ದ ಕೋತಿಯನ್ನು ನಿತ್ಯ ಉಪಚರಿಸಿ ಪ್ರೀತಿ ನೀಡುತ್ತಿದ್ದರು. ಆದರೆ, ಇದೀಗ ಅಜ್ಜಿ ನಿಧನರಾಗಿದ್ದು, ಈ ವಿಚಾರ ಗೊತ್ತಾಗಿ ಆ ಕೋತಿ ಮರುಗಿದ್ದು, ಈ ವೀಡಿಯೋ ವೈರಲ್ ಆಗಿದೆ. ಅಜ್ಜಿಯ ಶವದ ಬಳಿ ಕೋತಿ ದುಃಖತಪ್ತವಾಗಿದ್ದು, ಇದು ಅಚ್ಚರಿ ಜೊತೆಗೆ ಮೂಕಪ್ರಾಣಿಯ ಪ್ರೇಮಕ್ಕೆ ಸಾಕ್ಷಿಯಾಗಿದೆ.

ಅಜ್ಜಿಯ ಮೃತದೇಹದ ಬಳಿ ಕೂತ ಕೋತಿ, ಅಜ್ಜಿಯ ಮುಖದ ಬಳಿ ತಲೆ ಬಾಗಿಸಿ ರೋದಿಸಿದೆ. ಈ ಘಟನೆ ನಡೆದಿರೋದು ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿಯಲ್ಲಿ. 80ರ ಹರೆಯದ ವೃದ್ಧೆ ಪಾರ್ವತಮ್ಮ ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿದ್ದರು.

ನಿತ್ಯ ಮನೆ ಬಳಿ ಬರುತ್ತಿದ್ದ ಕೋತಿಗೆ ಪಾರ್ವತಮ್ಮ ತಿಂಡಿ ಕೊಟ್ಟು ನೋಡಿಕೊಂಡಿದ್ದರು. ಇವರ ಪ್ರೀತಿಗೆ ಪಾತ್ರವಾಗಿದ್ದ ಕೋತಿಯೂ ಅವರೊಂದಿಗೆ ಆತ್ಮೀಯವಾಗಿತ್ತು. ಆದರೆ, ಅದ್ಯಾವಾಗ ಪಾರ್ವತಮ್ಮ ನಿಧನರಾದ ವಿಚಾರ ಗೊತ್ತಾಯಿತೋ ಕೋತಿ ಆಕೆಯ ಪಾರ್ಥೀವ ಶರೀರದ ಮುಂದೆ ಮೂಕ ರೋದನ ಮಾಡಿದೆ. ಈ ವೀಡಿಯೋ ಇದೀಗ ವೈರಲ್ ಆಗಿದೆ. ಕೋತಿ ಹಾಗೂ ವೃದ್ಧೆಯ ಬಾಂಧವ್ಯ ಕಂಡು ಎಲ್ಲರೂ ಆಶ್ಚರ್ಯ ಚಕಿತರಾಗಿದ್ದಾರೆ.

 

Related Articles

Back to top button
error: Content is protected !!