ಧಾರ್ಮಿಕ

ಶ್ರೀ ಶಂಕರ ವಿಜಯೋತ್ಸವ; ಶ್ರೀ ಶೃಂಗೇರಿ ಶಂಕರ ಮಠ ಕುಂಭಕಾಶಿ ಆನೆಗುಡ್ಡೆಯ ವತಿಯಿಂದ ತಾಲೂಕು ಮಟ್ಟದ ಸ್ಪರ್ಧೆ

Views: 10

ಕನ್ನಡ ಕರಾವಳಿ ಸುದ್ದಿ: ಉಡುಪಿಯ ಎಂ.ಜಿ.ಎಂ. ಕ್ರೀಡಾಂಗಣದಲ್ಲಿ ಡಿ. 28, 29 ಮತ್ತು 30ರಂದು ನಡೆಯಲಿರುವ ‘ಶ್ರೀ ಶಂಕರ ವಿಜಯೋತ್ಸವ 2026, ಪ್ರಯುಕ್ತ ಕುಂದಾಪುರ ತಾಲೂಕು ವಲಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಮ್ಮ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಸನಾತನ ಧರ್ಮವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸದುದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರೀ ಶಂಕರಾಚಾರ್ಯ ಮಹಾಸ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ ಶೃಂಗೇರಿ. ಪ್ರಸ್ತುತ 36ನೇ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಹಾಗೂ ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಕೃಪಾಶೀರ್ವಾದದೊಂದಿಗೆ, ಶ್ರೀ ಶೃಂಗೇರಿ ಶಂಕರ ಮಠ ಕುಂಭಕಾಶಿ ಆನೆಗುಡ್ಡೆಯ ವತಿಯಿಂದ ನವೆಂಬರ್ 27ರಂದು ಬೆಳಿಗ್ಗೆ 9.30ಕ್ಕೆ ಕುಂಭಕಾಶಿಯ ಶ್ರೀ ಶಂಕರ ಮಠದ ಶ್ರೀ ಭಾರತೀ ತೀರ್ಥ ಸಭಾಭವನದಲ್ಲಿ ಈ ಸ್ಪರ್ಧೆಗಳು ಜರುಗಲಿವೆ.

ವಿಭಾಗವಾರು ಸ್ಪರ್ಧೆಗಳ ವಿವರ

ಹಿರಿಯ ಪ್ರಾಥಮಿಕ ಶಾಲಾ ವಿಭಾಗ (5, 6, 7ನೇ ತರಗತಿ)

ಸ್ತೋತ್ರ ಗಾಯನ: ಭಜಗೋವಿಂದಂ (8 ಚರಣ)

ಭಾಷಣ (3+1 ನಿಮಿಷ): ಶ್ರೀ ಶಂಕರರ ಜೀವನದ ಘಟನೆಗಳು

ಪ್ರೌಢ ಶಾಲಾ ವಿಭಾಗ (8, 9, 10ನೇ ತರಗತಿ)

ಸ್ತೋತ್ರ ಗಾಯನ: ತೋಟಕಾಷ್ಟಕಂ (8 ಚರಣ)

ಭಾಷಣ (3+1 ನಿಮಿಷ): ಶ್ರೀ ಶಂಕರರ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಣೆಗಳು

ಪದವಿ ಪೂರ್ವ ಕಾಲೇಜು ವಿಭಾಗ (11, 12ನೇ ತರಗತಿ)

ಸ್ತೋತ್ರ ಗಾಯನ: ಭವಾನಿ ಅಷ್ಟಕಂ (8 ಚರಣ)

ಭಾಷಣ (3+1 ನಿಮಿಷ): ಭಾರತದ ಪುನರುತ್ಥಾನದಲ್ಲಿ ಶ್ರೀ ಶಂಕರರ ಕೊಡುಗೆ

ರಸಪ್ರಶ್ನೆ (ಎಲ್ಲಾ ವಿಭಾಗದವರಿಗೆ): ಶ್ರೀ ಶಂಕರರ ಜೀವನ, ತತ್ತ್ವಶಾಸ್ತ್ರ ಮತ್ತು ಸನಾತನ ಧರ್ಮರಕ್ಷಣೆಯ ಕುರಿತು ಲಿಖಿತ ಸ್ಪರ್ಧೆ (40+20 ನಿಮಿಷ )ನಡೆಯಲಿದೆ.

ಬಹುಮಾನ ಹಾಗೂ ಸೌಲಭ್ಯಗಳು

ತಾಲೂಕು ಮಟ್ಟದ ವಿಜೇತರಿಗೆ ಪ್ರಥಮ ₹4,000, ದ್ವಿತೀಯ ₹3,000, ತೃತೀಯ ₹2,000 ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರಥಮ ₹40,000, ದ್ವಿತೀಯ ₹30,000, ತೃತೀಯ ₹20,000 ಹಾಗೂ ಸಮಾಧಾನಕರ ಬಹುಮಾನ ಪಡೆಯಲಿದ್ದಾರೆ. ಭಾಗವಹಿಸುವಎಲ್ಲಾ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುವುದು. ಸಂಯೋಜಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.

ನೋಂದಣಿ ಮತ್ತು ಸಂಪರ್ಕ

ಆಕರ ಪುಸ್ತಕಗಳ ಮಾಹಿತಿ ಹಾಗೂ ಹೆಸರು ನೋಂದಣಿಗಾಗಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿಗಳಾದ ವೇ.ಮೂ. ಲೋಕೇಶ ಅಡಿಗ ಹಾಗೂ ಬಡಾಕೆರೆ ನಾಗ ಪಾತ್ರಿಗಳು (8277397605, 9743155808) ಅಥವಾ ಶಾಂಕರ ತತ್ತ್ವ ಪ್ರಸಾರಕರಾದ ಡಾ. ವೆಂಕಟರಾಮ್ ಭಟ್ ನೆಂಪು (9900199644) ಅವರನ್ನು ಸಂಪರ್ಕಿಸಬಹುದು.

Related Articles

Back to top button
error: Content is protected !!