ಸಂಭ್ರಮಾಚರಣೆಯಲ್ಲಿ ಜೋರಾದ ಸಂಗೀತ, ತಾಯಿಯ ಸೂಚನೆಯಂತೆ ನೆರಮನೆಯ 16ರ ಬಾಲಕಿಯನ್ನು ಗುಂಡಿಕ್ಕಿ ಕೊಂದ 10 ವರ್ಷದ ಮಗ!
Views: 121
ಕನ್ನಡ ಕರಾವಳಿ ಸುದ್ದಿ: ಜೋರಾಗಿ ಹಾಡು ಹಾಕಿದ ವಿಚಾರಕ್ಕೆ ಶುರುವಾದ ಜಗಳವು ವಿಕೋಪಕ್ಕೆ ತಿರುಗಿ, 10 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಸೂಚನೆಯಂತೆ ನೆರೆಯ 16 ವರ್ಷದ ಬಾಲಕಿಯನ್ನು ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ಅಮೆರಿಕದ ಮೆಕ್ಸಿಕೋ ರಾಜ್ಯದ ಆಲ್ಬುಕರ್ಕ್ನಲ್ಲಿ ಆ ನಡೆದಿದೆ.
ಲೋವೀನ್ ಆಚರಣೆಯಲ್ಲಿ ದುರ್ಘಟನೆ ಸಂಭವಿಸಿದ್ದು, ಮನೆಯ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ಈ ಭಯಾನಕ ದೃಶ್ಯಗಳನ್ನು ಪೊಲೀಸರು ಇದೀಗ ಬಿಡುಗಡೆ ಮಾಡಿದ್ದಾರೆ.
ಘಟನೆಯ ವಿವರ: ಹ್ಯಾಲೋವೀನ್ ಹಬ್ಬದ ಸಂಭ್ರಮಾಚರಣೆಯ ವೇಳೆ ನೆರೆಯ ಮನೆಯಲ್ಲಿ ಜೋರಾಗಿ ಸಂಗೀತ ಹಾಕಲಾಗಿತ್ತು. ಇದಕ್ಕೆ 40 ವರ್ಷದ ಎಲೈನಾ ಗೊಮೆಜ್-ವೆಲ್ಲೆಡಾ ಆಕ್ಷೇಪ ವ್ಯಕ್ತಪಡಿಸಿದ್ದಳು. ಇದೇ ವಿಚಾರವಾಗಿ 16 ವರ್ಷದ ಕೀನೆರ್ಲೀನ್ ಪ್ಲಾಜಾ ರಾಂಗೆಲ್ ಹಾಗೂ ಎಲೈನಾ ನಡುವೆ ಮಾತಿನ ಚಕಮಕಿ ಶುರುವಾಗಿ, ಇಬ್ಬರೂ ಪರಸ್ಪರ ಹೊಡೆದಾಡಿಕೊಂಡು ಕೂದಲು ಹಿಡಿದು ಎಳೆದಾಡಿದ್ದಾರೆ.
ಜಗಳ ತಾರಕಕ್ಕೇರಿದಾಗ ಎಲೈನಾ ತನ್ನ 10 ವರ್ಷದ ಮಗನಿಗೆ ಮನೆಯ ಒಳಗಿಂದ ಪಿಸ್ತೂಲ್ ತರುವಂತೆ ಕೂಗಿದ್ದಾಳೆ. ತಕ್ಷಣ ಒಳಗೆ ಓಡಿದ ಬಾಲಕ ಪಿಸ್ತೂಲ್ ತಂದು ಜಗಳವಾಡುತ್ತಿದ್ದವರತ್ತ ಗುರಿ ಇಟ್ಟಿದ್ದಾನೆ. ಈ ವೇಳೆ ಎಲ್ಲೆನಾ, “ಅವನು ಗುಂಡು ಹಾರಿಸುತ್ತಾನೆ, ನೋಡು ಯಾರಿಗಾದರೂ ಗುಂಡು ಹೊಡೆಯುತ್ತಾನೆ” ಎಂದು ಎಚ್ಚರಿಸಿದ್ದಾಳೆ. ಅಷ್ಟರಲ್ಲೇ ಬಾಲಕ ಎರಡು ಸುತ್ತು ಗುಂಡು ಹಾರಿಸಿದ್ದು, 16 ವರ್ಷದ ಕೀನರ್ಲೀನ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ತನ್ನ ಮನೆಯಿಂದಲೇ ಈ ದೃಶ್ಯವನ್ನು ಕಂಡ ಮೃತ ಬಾಲಕಿಯ ತಂದೆ ಕೀನರ್ ಪ್ಲಾಜಾ, ಆಕ್ರೋಶದಿಂದ ಎಲೈನಾ ಮನೆಯ ಬಾಗಿಲು ಮುರಿದು ಒಳನುಗಲು ಯತ್ನಿಸಿದ್ದಾರೆ. ಆಗ ಎಲೈನಾ ಮಗನ ಕೈಯಲ್ಲಿದ್ದ ಪಿಸ್ತೂಲ್ ಕಿತ್ತುಕೊಂಡು ಅವರ ಮೇಲೊ ಗುಂಡು ಹಾರಿಸಿದ್ದಾಳೆ. ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೀನ್ತರ್ ಪ್ಲಾಜಾ, “ಅವರು ನಮ್ಮ ಸಂತೋಷವನ್ನೇ ಕಿತ್ತುಕೊಂಡರು. ಮಗಳು ಬೆಳೆದು ದೊಡ್ಡವಳಾಗುವುದನ್ನು ನೋಡುವುದು ನಮ್ಮ ದೊಡ್ಡ ಕನಸಾಗಿತ್ತು. ಆದರೆ ಅವಳು ಈ ರೀತಿ ಹೋಗಿದ್ದು ಅನ್ಯಾಯ” ಎಂದು ಕಣ್ಣೀರಿಟ್ಟಿದ್ದಾರೆ.
ಘಟನೆ ಬಳಿಕ ಎಲೈನಾ ಸ್ವತಃ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಕೀನರ್ಲೀನ್ ಮೃತದೇಹ ನೆಲದ ಮೇಲೆ ಬಿದ್ದಿತ್ತು ಹಾಗೂ ಎಲೈನಾ ಕೈಯಲ್ಲಿ ಪಿಸ್ತೂಲ್ ಇತ್ತು. ಈ ವೇಳೆ ಪೊಲೀಸ್ ಅಧಿಕಾರಿಗಳು ಎರಡು ಸುತ್ತು ಗುಂಡು ಹಾರಿಸಿದರಾದರೂ, ಗುಂಡು ಅಪಾರ್ಟ್ಮೆಂಟ್ನ ಹೊರಗಿನ ಗೋಡೆಗೆ ತಗುಲಿದೆ.
ಸದ್ಯ ಎಲೈನಾಳನ್ನು ಬಂಧಿಸಲಾಗಿದ್ದು, ಗ್ರಾಂಡ್ ಜ್ಯೂರಿ ಆಕೆಯ ವಿರುದ್ಧ ಎರಡನೇ ದರ್ಜೆಯ ಕೊಲೆ ಪ್ರಕರಣ ದಾಖಲಿಸಿದೆ. ಇನ್ನು ಗುಂಡು ಹಾರಿಸಿದ 10 ವರ್ಷದ ಬಾಲಕನ ವಯಸ್ಸು ಚಿಕ್ಕದಾಗಿರುವುದರಿಂದ ಆತನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲು ಸಾಧ್ಯವಿಲ್ಲ. ಆತನಿಗೆ 12 ವರ್ಷ ತುಂಬುವವರೆಗೂ ಕಾನೂನು ಕ್ರಮದ ಬಗ್ಗೆ ವಕೀಲರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಲ್ಬುಕರ್ಕ್ ಪೊಲೀಸ್ ಮುಖ್ಯಸ್ಥೆ ಸೆಸಿಲಿ ಬಾರ್ಕೆರ್ ತಿಳಿಸಿದ್ದಾರೆ.






