ಜನಮನ

ಕಚೇರಿಯಲ್ಲಿ ಕುಳಿತಲ್ಲೇ ಹೃದಯಾಘಾತ; ಸಾಲಿಗ್ರಾಮ ಸಂಖ್ಯಾಶಾಸ್ತ್ರ ಜ್ಯೋತಿಷಿ ಸಾವು

Views: 50

ಕನ್ನಡ ಕರಾವಳಿ ಸುದ್ದಿ, ಕಚೇರಿಯಲ್ಲಿ ಕುಳಿತಲ್ಲೇ ಹೃದಯಾಘಾತದಿಂದ ಸಂಖ್ಯಾಶಾಸ್ತ್ರಜ್ಞ ಸಾವನ್ನಪ್ಪಿದ ಘಟನೆ ಸಾಲಿಗ್ರಾಮದಲ್ಲಿ ನ.19ರಂದು ಸಂಭವಿಸಿದೆ.

ಸಾಲಿಗ್ರಾಮದ ಚೇಂಪಿ ನಿವಾಸಿ ದಿನೇಶ್ ಹೊಳ್ಳ ಸಿ. (50) ಮೃತಪಟ್ಟವರು.

ಎಂದಿನಂತೆ ಬೆಳಿಗ್ಗೆ ಸಾಲಿಗ್ರಾಮದಲ್ಲಿರುವ ಕಚೇರಿಗೆ ಆಗಮಿಸಿ ಕೆಲಸ ಆರಂಭಿಸಿದ್ದು ಸ್ವಲ್ಪ ಹೊತ್ತಿನಲ್ಲೇ ಪರಿಚಯದವರೊಬ್ಬರು ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭ ದಿನೇಶ್ ಹೊಳ್ಳ ಟೇಬಲ್ ಮೇಲೆ ಬಿದ್ದ ಸ್ಥಿತಿಯಲ್ಲಿದ್ದರು. ತತ್ ಕ್ಷಣ ಸ್ಥಳೀಯರೊಂದಿಗೆ ಸೇರಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು ಅಷ್ಟರಲ್ಲಾಗಲೆ ಇವರು ಮೃತ ಪಟ್ಟಿದ್ದರು. ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತಿಳಿಯಲಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.

ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.ಇವರು ಸಂಖ್ಯಾಶಾಸ್ತ್ರದ (Numerology) ಆಧಾರದ ಮೇಲೆ ಜ್ಯೋತಿಷ್ಯ ಮಾರ್ಗದರ್ಶನ ನೀಡುತ್ತಿದ್ದರು. ಅಲ್ಲದೆ ಫೋಟೋಗ್ರಫಿ, ಕಂಪ್ಯೂಟರ್ ತಂತ್ರಜ್ಞಾನ, ವೆಬ್ ಡಿಸೈನಿಂಗ್, ವ್ಯಂಗ್ಯಚಿತ್ರ ರಚನೆ ಮತ್ತು ಪಾದರಕ್ಷೆ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು.

 

 

Related Articles

Back to top button
error: Content is protected !!