ಧಾರ್ಮಿಕ
ಕುಂದಾಪುರ: ಹಂಗಳೂರು ಶನೀಶ್ವರ ದೇವಸ್ಥಾನದ ಛಾಯಾಾನಂದನ ಮಂಡಳಿಯ ಸದಸ್ಯ ಸೋಮಯ್ಯ ಪೂಜಾರಿ ನಿಧನ
Views: 70
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಶ್ರೀ ಕ್ಷೇತ್ರ ಹಂಗಳೂರು ಶನೀಶ್ವರ ದೇವಸ್ಥಾನದ ಛಾಯಾಾನಂದನ ಮಂಡಳಿಯ ಸದಸ್ಯರಾದ ನೇರಂಬಳ್ಳಿ ಸೋಮಯ್ಯ ಪೂಜಾರಿ (74) ಯವರು ನ.18ರಂದು ಅಲ್ಪಕಾಲದ ಅಸ್ವಸ್ಥತೆಯಿಂದ ನಿಧನರಾದರು.
ಶನೀಶ್ವರ ಮಹಾತ್ಮೆ ‘ಲೋಲಿಕೆ’ ಒಂದು ಕಾಲ್ಪನಿಕ ಹಾಗೂ ಅತ್ಯಂತ ಪ್ರಮುಖ ಪಾತ್ರವಾಗಿದೆ. ಶನಿದೇವರ ಮಾಯೆ ಮತ್ತು ದರ್ಪಹರಣದ ಲೀಲೆಗಳನ್ನು ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಈ ಪಾತ್ರವನ್ನು ಮನೋಜ್ಞವಾಗಿ ನಿರ್ವಹಿಸುತ್ತಿದ್ದರು. ರಾಜಕೀಯ ಮುತ್ಸದ್ದಿಯಾದ ಪೂಜಾರಿಯವರು ಪತ್ನಿ , ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.






