ಕೆಪಿಎಸ್ಸಿ ನೇಮಕಾತಿ ಹಗರಣ; ಎಸ್ಐಟಿಯಿಂದ ಬಿ.ವಿ.ಗೀತಾ ಅರೆಸ್ಟ್
Views: 20
ಕನ್ನಡ ಕರಾವಳಿ ಸುದ್ದಿ: ಕೆಪಿಎಸ್ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿಂದ ನೇಮಿತವಾಗಿರುವ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ಚುರುಕುಗೊಳಿಸಿದೆ. ಇದರ ಭಾಗವಾಗಿ ಜಾಮೀನು ಪಡೆದು ಹೊರಗೆ ಬಂದಿದ್ದ ಕೆಪಿಎಸ್ಸಿ ಸದಸ್ಯೆ ಬಿ.ವಿ ಗೀತಾರನ್ನು ಮಂಗಳವಾರ ಎಸ್ಐಟಿ ಬಂಧನ ಮಾಡಿದೆ.
ಎಸ್ಐಟಿ ರಚನೆಯಾದ ಬಳಿಕ ಈಗಾಗಲೇ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ರನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದರ ನಡುವೆ ಈಗಾಗಲೇ ಒಮ್ಮೆ ಬಂಧನವಾಗಿ ಜಾಮೀನು ಪಡೆದು ಹೊರಗೆ ಬಂದಿದ್ದ ಬಿ.ವಿ ಗೀತಾರನ್ನು ಈಗ ಎಸ್ಐಟಿ ಪುನಃ ಬಂಧಿಸಿರುವುದು ತನಿಖೆ ಮತ್ತಷ್ಟು ಚುರುಕು ಪಡೆದುಕೊಂಡಿದೆ
ಕೆಲ ದಿನಗಳ ಹಿಂದಷ್ಟೇ ಜಾರಿ ನಿರ್ದೇಶನಾಲಯ(ಈ.ಡಿ) ಶಿವಶಂಕರಪ್ಪ ಸಾಹುಕಾರ್, ಬಿವಿ ಗೀತಾ, ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಬಸವರಾಜ್ ಕನ್ನಾಳೆ ವಿರುದ್ದ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು. ಅಲ್ಲದೆ, ಈ ನಾಲ್ವರಿಗೂ ಸಂಬಂಧಿಸಿದ 1.22 ಕೋಟಿ ಮೌಲ್ಯದ ಚರ ಹಾಗೂ ಸ್ಥಿರಾಸ್ತಿಯನ್ನ ಜಪ್ತಿ ಮಾಡಿತ್ತು.






