ಜನಮನ

ಮಂಗಳೂರು- ಮುಂಬಯಿ ಮಧ್ಯೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಸೂಪ‌ರ್ ಫಾಸ್ಟ್‌ನಿಂದ ಸಾಮಾನ್ಯ ಎಕ್ಸ್‌ಪ್ರೆಸ್ ದರ್ಜೆಗೆ

Views: 34

ಕನ್ನಡ ಕರಾವಳಿ ಸುದ್ದಿ: ಮಂಗಳೂರು -ಮುಂಬಯಿ ಮಧ್ಯೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಜ.1ರಿಂದ ಸಾಮಾನ್ಯ ಎಕ್ಸ್‌ಪ್ರೆಸ್ ರೈಲ್ ಆಗಿ ಸಂಚರಿಸಲಿದೆ.

ಮಂಗಳೂರು ಸೆಂಟ್ರಲ್‌ ಮುಂಬಯಿ ಲೋಕಮಾನ್ಯ ತಿಲಕ್ ಟರ್ಮಿನಲ್ ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನ ದರ್ಜೆಯನ್ನು ಸೂಪರ್‌ಫಾಸ್ಟ್‌ನಿಂದ ಮೇಲ್/ಎಕ್ಸ್‌ಪ್ರೆಸ್‌ಗೆ ಇಳಿಸಲ ಇಳಿಸಲಾಗಿದೆ.ಜ. 6ರಿಂದ ಪರಿಷ್ಕೃತ ದರ ಜಾರಿಯಾಗಲಿದ್ದು, ಪ್ರಯಾಣಿಕರಿಗೆ ಕನಿಷ್ಠ 15 ರೂ. ಗಳಿಂದ ಗರಿಷ್ಠ 45 ರೂ. ವರೆಗೆ ದರ ಕಡಿಮೆಯಾಗುವ ಸಾಧ್ಯತೆಯಿದೆ. ಸೂಪರ್ ಎಕ್ಸ್‌ಪ್ರೆಸ್ ಪ್ರಯಾಣ ದರ ಈವರೆಗೂ ವಿಧಿಸಲಾಗುತಿದ್ದು, ಅದು 2027ರ ಜ. 6ರ ಬಳಿಕ ಸಾಮಾನ್ಯ ಎಕ್ಸ್‌ಪ್ರೆಸ್‌ ಪ್ರಯಾಣ ದರದಂತೆ ಮರು ನಿಗದಿಯಾಗಲಿದೆ.

ಸೂಪರ್‌ಫಾಸ್ಟ್ ಹೆಸರಿನಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಪ್ರಯಾಣಿಕರು ಹಾಗೂ ರೈಲು ಹಿತರಕ್ಷಣಾ ಸಂಘಟನೆಗಳು ನಿರಂತರವಾಗಿ ಪ್ರಶ್ನಿಸುತ್ತಿದ್ದವು. ಈ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ.

ರೈಲು ಸಂಖ್ಯೆಯಲ್ಲಿ ಬದಲಾವಣೆ

ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಗಂಟೆಗೆ ಸರಾಸರಿ 55 ಕಿ. ಮೀ. ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿ ಗಮ್ಯಸ್ಥಾನ ತಲುಪಬೇಕು. ಆದರೆ ಮಕ್ಷ್ಯಗಂಧ ಎಕ್ಸ್‌ಪ್ರೆಸ್ ವೇಗ ಗಂಟೆಗೆ 55 ಕಿ. ಮೀ.ಗಿಂತ ಕಡಿಮೆಯಿದೆ. ಹೀಗಾಗಿ ಪ್ರಸ್ತುತ ರೈಲು 12619/12620 ಸಂಖ್ಯೆಯೊಂದಿಗೆ ಚಲಿಸುತ್ತಿದ್ದು, 2027ರ ಜ. 1ರ ಬಳಿಕ 16369/16370 ಆಗಲಿದೆ.

ಇದರ ಜತೆಗೆ ಮುಂಬಯಿ ಲೋಕಮಾನ್ಯ ತಿಲಕ್ ಟರ್ಮಿನಲ್‌ ನಿಂದ ತಿರುವನಂತಪುರಂ ನಡುವೆ ಸಂಚರಿಸುವ ನಾರ್ತ್ ಗರಿಬ್‌ರಾತ್ ಸೂಪರ್ ಫಾಸ್ಟ್ ರೈಲು ಸಂಖ್ಯೆಯು 12201 ರಿಂದ 16371ಕ್ಕೆ ಬದಲಾಯಿಸಲಾಗಿದೆ ಎಂದು ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ.

Related Articles

Back to top button
error: Content is protected !!