ಭೂಗತ ಲೋಕದ ಪಾತಕಿ ಹೇಮಂತ್ ಪೂಜಾರಿ ಅರೆಸ್ಟ್! ಶೀಘ್ರದಲ್ಲೇ ಭಾರತಕ್ಕೆ ಕರೆತರುವ ನಿರೀಕ್ಷೆ
Views: 0
ಕನ್ನಡ ಕರಾವಳಿ ಸುದ್ದಿ ಉಡುಪಿ ಜಿಲ್ಲೆಯಲ್ಲಿ ಉದ್ಯಮಿಗಳಿಗೆ ಕರೆ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಮತ್ತು ಆತನ ಸಹಚರ ಎನ್ನಲಾದ ಕಲಿ ಯೋಗೀಶನನ್ನು ಇಂಟರ್ ಪೋಲ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂಬ ಲಭ್ಯವಾಗಿದೆ. ಮಾಹಿತಿ
ಮುಂಬೈನಿಂದ ಹಲವು ವರ್ಷಗಳ ಹಿಂದೆಯೇ ವಿದೇಶಕ್ಕೆ ಹಾರಿದ್ದ ನಟೋರಿಯಸ್ ಕ್ರಿಮಿನಲ್ ಹೇಮಂತ್ ಪೂಜಾರಿ ಉಡುಪಿ ಜಿಲ್ಲೆಯ ಮೂಲದವರಾಗಿದ್ದು ಮುಂಬೈನಲ್ಲಿ ಅಪರಾಧ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ. ಎರಡು ವರ್ಷಗಳಿಂದ ಉಡುಪಿ, ಕುಂದಾಪುರ ಭಾಗದ 17ಕ್ಕೂ ಹೆಚ್ಚಿನ ಬಿಲ್ಡರ್ ಗಳು, ಹೊಟೇಲ್ ಉದ್ಯಮಿಗಳು, ಸಿವಿಲ್ ಕಾಂಟ್ರಾಕ್ಟರುಗಳು ಹಾಗೂ ಕೆಲವು ಕಂಪೆನಿಗಳ ಮುಖ್ಯಸ್ಥರಿಗೆ ಇಂಟರ್ನೆಟ್ ಕರೆ ಮೂಲಕ ಹಣಕ್ಕಾಗಿ ಒತ್ತಾಯಿಸುತ್ತಿದ್ದ. ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿಯೂ ಬೆದರಿಕೆ ಒಡ್ಡಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು.
ಕಳೆದ ಸೆಪ್ಟೆಂಬರ್ ನಲ್ಲಿ ಮುದರಂಗಡಿಯ ಉದ್ಯಮಿ ಡೇವಿಡ್ ಅವರನ್ನು ಹೇಮಂತ್ ಪೂಜಾರಿ ಸಹಚರರು ತಲೆಗೆ ಗುಂಡಿಕ್ಕಿ ಕೊಲೆ ಮಾಡಿದ್ದು, ಒಟ್ಟು 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಹೇಮಂತ್ ಪೂಜಾರಿಯನ್ನು 11ನೇ ಆರೋಪಿಯಾಗಿ ಹೆಸರಿಸಿ ಕೋಕಾ (KCOCA) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರುಲ ಇತ್ತೀಚೆಗೆ ಹೇಮಂತ ಪೂಜಾರಿ ವಿರುದ್ಧ ಶಿರ್ವ, ಪಡುಬಿದ್ರಿ, ಕಾಪು ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 8 ಪ್ರಕರಣಗಳನ್ನು ದಾಖಲಿಸಿದ್ದು, ಹೇಮಂತ ಪೂಜಾರಿಗೆ ಸ್ಥಳೀಯ ಉದ್ಯಮಿಗಳ ಮಾಹಿತಿ ಒದಗಿಸುತ್ತಿದ್ದ ಎರ್ಮಾಳು ಬಡಾ ನಿವಾಸಿ ಸುರೇಶ್ ಅಮೀನ್ (38) ಹಾಗೂ ಹರೀಶ್ ಪೂಜಾರಿ ಸಾಂತೂರು (45) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದರು.
ಇತ್ತೀಚೆಗೆ ಯುಪಿಸಿಎಲ್ ಆಳ್ವರಿಗೂ ಬೆದರಿಕೆ ಬಂದಿತ್ತು. ಇದೇ ಹಿನ್ನೆಲೆಯಲ್ಲಿ ಕೇಂದ್ರ ಗೃಹಮಂತ್ರಿ ಅಮಿತ್ ಷಾ ಅವರಿಗೆ ಅದಾನಿ ಕಂಪನಿಯ ಮೂಲಕ ಹೇಮಂತ್ ಪೂಜಾರಿ ಬೇಟೆಗೆ ಒತ್ತಡ ಹೇರಲಾಗಿತ್ತು. ಇದರಂತೆ, ಮುಂಬೈ ಪೊಲೀಸರು ರಾ ಮತ್ತು ಇಂಟರ್ ಪೋಲ್ ತಂಡದ ಮೂಲಕ ಕಾರ್ಯಾಚರಣೆ ನಡೆಸಿ ಹೇಮಂತ ಪೂಜಾರಿ ಮಲೇಷ್ಯಾ- ಮ್ಯಾನ್ಮಾರ್ ಗಡಿಭಾಗದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದಿದ್ದರು. ಬಳಿಕ ಮುಂಬೈನಲ್ಲಿದ್ದ ಹೇಮಂತ ಪೂಜಾರಿಯ ಆಪ್ತರೊಬ್ಬರನ್ನು ಮಲೇಷ್ಯಾಕ್ಕೆ ಕರೆದುಕೊಂಡು ಹೋಗಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಹೇಮಂತ್ ಪೂಜಾರಿಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದಾನಿ ಕಂಪನಿಯ ಕಿಶೋರ್
ಇದಕ್ಕೂ ಹಿಂದೆಯೇ ಉಡುಪಿ ಮೂಲದ ಮತ್ತೊಬ್ಬ ಪಾತಕಿ ಕಲಿ ಯೋಗೀಶನನ್ನೂ ದುಬೈನಲ್ಲಿ ಇಂಟರ್ ಪೋಲ್ ಮೂಲಕ ಅರೆಸ್ಟ್ ಮಾಡಲಾಗಿದೆ ಎನ್ನುವ ಮಾಹಿತಿಯೂ ಇದೆ. ಇಬ್ಬರನ್ನೂ ಅಲ್ಲಿನ ಕಾನೂನು ಅಗತ್ಯಗಳನ್ನು ಪೂರೈಸಿ ಪೊಲೀಸರು ಸದ್ಯದಲ್ಲೇ ದೆಹಲಿಗೆ ಕರೆತರಲಿದ್ದಾರೆ.






