ವಕ್ವಾಡಿ ಸರಕಾರಿ ಪ್ರೌಢ ಶಾಲೆ: ಹದಿಹರೆಯದ ಆರೋಗ್ಯ, ಸ್ಕ್ರೀನ್ ಅಡಿಕ್ಷನ್, ಮಕ್ಕಳ ಹಕ್ಕು ಮತ್ತು ಆರ್ಥಿಕ ಸಾಕ್ಷರತೆ ಬಗ್ಗೆ ಮಾಹಿತಿ ಕಾರ್ಯಕ್ರಮ
Views: 9
ಕನ್ನಡ ಕರಾವಳಿ ಸುದ್ದಿ: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಟಿಎಂಜಿ ಸುನಿಧಿ ಫೌಂಡೇಶನ್ ಮತ್ತು ಎಂಪಿಐಎಸ್ ಮಣಿಪಾಲ ಇವರ ಸಹಯೋಗದಲ್ಲಿ ಹದಿಹರೆಯದ ಆರೋಗ್ಯ, ಸ್ಕ್ರೀನ್ ಅಡಿಕ್ಷನ್, ಮಕ್ಕಳ ಹಕ್ಕು ಮತ್ತು ಆರ್ಥಿಕ ಸಾಕ್ಷರತೆ ಬಗ್ಗೆ ಮಾಹಿತಿ ಕಾರ್ಯಕ್ರಮ ವಕ್ವಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿತು.
ಶ್ರೀ ರಾಘವೇಂದ್ರ ಆಚಾರ್ಯ, ಕಾರ್ಯಕರ್ತರು ಬಿವಿಟಿ ಮಣಿಪಾಲ ಪ್ರಸ್ತಾವಿಕವಾಗಿ ಮಾತನಾಡಿ ಮಾಹಿತಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಡಾ. ಮಾಧವ ಪೈ, ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರ ಕೋಟ ಇವರು ಹದಿಹರೆಯದ ಆರೋಗ್ಯ, ಸ್ಕ್ರೀನ್ ಅಡಿಕ್ಷನ್ ಬಗ್ಗೆ ಮಾಹಿತಿ ನೀಡಿದರು.
ಶ್ರೀಮತಿ ದೀಪಾ, ಜೆಂಡರ್ ಸ್ಪೆಷಲಿಸ್ಟ್, ಮಹಿಳಾ ಮತ್ತು ಮಕ್ಕಳ ಇಲಾಖೆ ಇವರು ಮಕ್ಕಳಿಗೆ ಇರುವ ಇಲಾಖೆಯ ಯೋಜನೆಗಳು ಹಾಗೂ ಆರ್ಥಿಕ ಸಾಕ್ಷರತೆ ವಿಷಯದ ಕುರಿತು ಮಾಹಿತಿ ನೀಡಿದರು.
ಶ್ರೀಮತಿ ಪ್ರಜ್ಞಾ ನಾಯಕ್ ಗಣಿತ ಅಧ್ಯಾಪಕರು ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಹುನ್ನುನೂರು ಲಮಾಣಿ ಹಿಂದಿ ಅಧ್ಯಾಪಕರು ಧನ್ಯವಾದಗೈದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾರತಿ ಹಾಗೂ ಶಾಲಾ ಸಿಬ್ಬಂದಿ ವರ್ಗ ಸಹಕರಿಸಿದರು. 80 ಮಕ್ಕಳು ಮಾಹಿತಿ ಕಾರ್ಯಕ್ರಮದ ಪ್ರಯೋಜನ ಪಡೆದರು.







