ಇತರೆ
ಕುಂದಾಪುರ: ಸಳ್ವಾಡಿ- ಕಕ್ಕೇರಿಯಲ್ಲಿ ರಾತ್ರಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಸಾವು
Views: 275
ಕನ್ನಡ ಕರಾವಳಿ ಸುದ್ದಿ: ರಾತ್ರಿ ಊಟ ಮಾಡಿ ಮಲಗಿದ ವ್ಯಕ್ತಿಯೊಬ್ಬರು ಬೆಳಿಗ್ಗೆ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಸಳ್ವಾಡಿ- ಕಕ್ಕೇರಿ ಎಂಬಲ್ಲಿ ಸಂಭವಿಸಿದೆ.
ಶ್ರೀಕಾಂತ್ (40) ಮೃತ ಪಟ್ಟವರು. ಇವರು ಕುಂದಾಪುರದಲ್ಲಿ L&T ಫೈನಾನ್ಸ್‌ವೊಂದರಲ್ಲಿ ರಿಕವರಿ ಆಫಿಸರ್ ಆಗಿ ಕಾರ್ಯನಿರ್ವಸುತ್ತಿದ್ದರು.
ಕಾಳಾವರ ಗ್ರಾಮದ ಸಳ್ವಾಡಿ -ಕಕ್ಕೇರಿ ಅಂಗನವಾಡಿ ಹತ್ತಿರ ತಾಯಿ,ಹೆಂಡತಿ,ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಶ್ರೀಕಾಂತ್ ಶುಕ್ರವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದು ಬೆಳಿಗ್ಗೆ ಏಳದಿರುವುದನ್ನು ಗಮನಿಸಿದ ಕುಟುಂಬಸ್ಥರು ಎಬ್ಬಿಸಲು ಹೋದಾಗ ಶ್ರೀಕಾಂತ್ ಏಳಲಿಲ್ಲ. ಕರೆದರೂ ಮಾತಾನಾಡಲಿಲ್ಲ.ಮೈ ಮುಟ್ಟಿ ನೋಡಿದಾಗ ದೇಹ ತಣ್ಣಗಾಗಿತ್ತು. ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





