ರಾಜಕೀಯ

ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್‌ಗೆ ಭಾರೀ ಹಿನ್ನಡೆ: ಭಾರತಕ್ಕೆ ಲಾಭವೋ..ನಷ್ಟವೋ..!?

Views: 0

ಕನ್ನಡ ಕರಾವಳಿ ಸುದ್ದಿ: ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಡೆಮೋಕ್ರಾಟ್ಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಎರಡೂ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ ಮತ್ತು ಸೆನೆಟ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ಡೊನಾಲ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷ ಹೀನಾಯ ಸೋಲು ಅನುಭವಿಸಿದೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್‌ನ ಒಟ್ಟು 435 ಸ್ಥಾನಗಳ ಪೈಕಿ ಡೆಮೋಕ್ರಾಟ್ಸ್ 228 ಸ್ಥಾನ ಗೆದ್ದುಕೊಂಡಿದ್ದರೆ, ರಿಪಬ್ಲಿಕನ್ ಪಕ್ಷ 139 ಸ್ಥಾನ ಗೆದಿದೆ.

100 ಸದಸ್ಯ ಬಲದ ಸೆನೆಟ್‌ನಲ್ಲಿ 35 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಡೆಮೋಕ್ರಾಟ್ಸ್ 19 ಸ್ಥಾನಗಳಲ್ಲಿ ಗೆದ್ದಿದ್ದರೆ, ರಿಪಬ್ಲಿಕನ್ ಪಕ್ಷ 11 ಸ್ಥಾನಗಳಲ್ಲಿ ಗೆದ್ದಿದೆ ಎಂದು ಮೂಲಗಳು ಹೇಳಿವೆ. ರಿಪಬ್ಲಿಕನ್ ಹಿಡಿತದಲ್ಲಿದ್ದ 7 ಸ್ಥಾನಗಳನ್ನು ಡೆಮೋಕ್ರಾಟ್ಸ್ ತನ್ನ ವಶಕ್ಕೆ ಪಡೆದಿದೆ. ಅಲ್ಲಿಗೆ ಸೆನೇಟ್‌ನಲ್ಲೂ ಡೆಮೋಕ್ರಾಟ್ಸ್ ಮುನ್ನಡೆ ಸಾಧಿಸಿದೆ. ಚುನಾವಣೆಯ ಅಂತಿಮ ಫಲಿತಾಂಶ ಇನ್ನಷ್ಟೇ ಪ್ರಕಟವಾಗಬೇಕು. ಅಮೆರಿಕದ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ನಡೆಯುವುದರಿಂದ ಫಲಿತಾಂಶ ಪ್ರಕಟವಾಗುವುದು ತುಸು ತಡವಾಗುತ್ತದೆ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತ್ತು ಸಂಸತ್ ಚುನಾವಣೆ ಪ್ರತ್ಯೇಕವಾಗಿಯೇ ನಡೆಯುತ್ತದೆ. ಪ್ರತಿ 2 ವರ್ಷ ಗಳಿಗೊಮ್ಮೆ ಅಲ್ಲಿ ಸಂಸತ್ ಚುನಾವಣೆ, 4 ವರ್ಷಗಳಿಗೊಮ್ಮೆ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಟ್ರಂಪ್‌ ಅಧ್ಯಕ್ಷರಾಗಿ ತಮ್ಮದೇ ಆದ ಅಧಿಕಾರ ಹೊಂದಿದ್ದರೂ, ಸಂಸತ್‌ನಲ್ಲಿ ಅವರ ಪಕ್ಷ ಬಹುಮತ ಕಳೆದುಕೊಂಡಿರುವುದರಿಂದ ಭಾರೀ ಹಿನ್ನಡೆ ಎದುರಿಸಿದ್ದಾರೆ.

ಟ್ರಂಪ್ ಸೋಲಿಗೆ ಕಾರಣ?

ಇರಾನ್ ವಿರುದ್ದ ಯುದ್ಧ, ಅಮೆರಿಕದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟು, ತೈಲಬೆಲೆಯೇರಿಕೆ, ನಿರುದ್ಯೋಗ, ವಿದೇಶಗಳ ವಿರುದ್ಧ ಬೇಕಾಬಿಟ್ಟಿ ಸುಂಕ ನೀತಿಯಿಂದ ಅಲ್ಲಿನ ಜನರು ಬೇಸತ್ತು ಹೋಗಿದ್ದರು. ಇದು ಚುನಾವಣೆಗೆ ಮುನ್ನವೇ ಬಹುತೇಕ ಸ್ಪಷ್ಟವಾಗಿತ್ತು.

ಭಾರತಕ್ಕೆ ಲಾಭವಿದೆಯಾ?

ಹೌಸ್ ಆಫ್ ರೆಪ್ರೆಸೆಂಟೇಟಿವ್ ಮತ್ತು ಸೆನೇಟ್‌ನಲ್ಲಿ ಟ್ರಂಪ್ ವಿರೋಧಪಕ್ಷ ಡೆಮೋಕ್ರಾಟ್ಸ್ ಪಕ್ಷ ಬಹುಮತ ಪಡೆದಿದೆ. ಇನ್ನು ನೀತಿ ರೂಪಿಸುವುದರಲ್ಲಿ ಟ್ರಂಪ್ ಏಕ ಪಕ್ಷೀಯ ನಿರ್ಣಯ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ.

ಎಚ್1ಬಿ ವೀಸಾಕ್ಕೆ 1 ಲಕ್ಷ ಡಾಲ‌ರ್ ಶುಲ್ಕ, ಗ್ರೀನ್ ಕಾರ್ಡ್ ವಿತರಣೆಗೆ ಟ್ರಂಪ್ 2 ಮಾಡಿರುವ ಬಿಗಿ ನಿರ್ಬಂಧಗಳು ಸಡಿಲವಾಗಬಹುದು. ಭಾರತೀಯ ಐಟಿ ಕಂಪನಿಗಳಿಗೆ ನೇಮಕದಲ್ಲಿ ಅನುಕೂಲವಾಗಬಹುದು.

ಭಾರತೀಯ ಉತ್ಪನ್ನಗಳ ಆಮದಿನ ಮೇಲೆ 3 ಟ್ರಂಪ್ ಶೇ.26ರಷ್ಟು ಸುಂಕ ಹೇರಿದ್ದರಿಂದ ಎರಡೂ ದೇಶಗಳ ಸಂಬಂಧ ಹಳಸಿತ್ತು. ಇದು ಮತ್ತೆ ಎಂದಿನಂತೆ ಆಗುವ ನಿರೀಕ್ಷೆ ಇದೆ.

Related Articles

Back to top button
error: Content is protected !!