ಇಂದು ಮಧ್ಯರಾತ್ರಿಯಿಂದ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಬಸ್ ದರ ಏರಿಕೆ!
Views: 40
ಕನ್ನಡ ಕರಾವಳಿ ಸುದ್ದಿ: ಬಸ್ ಪ್ರಯಾಣವನ್ನೇ ಅವಲಂಬಿಸಿರುವ ಸಾರ್ವಜನಿಕರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ. ಡೀಸೆಲ್ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಪ್ರಯಾಣ ದರವನ್ನು ಸರ್ಕಾರ ಪರಿಷ್ಕರಿಸಿದೆ.
ಹೊಸ ದರದ ಪ್ರಕಾರ ಸಾಮಾನ್ಯ ಸಾರಿಗೆಯಲ್ಲಿ ₹9 ಹಾಗೂ ವೇಗದೂತ ಬಸ್ಗಳಲ್ಲಿ ₹18ರವರೆಗೆ ಹೆಚ್ಚಳವಾಗಲಿದೆ (Bus Ticket Prices Hiked) ಎಂದು ಸಾರಿಗೆ ಸಚಿವ ಬೈರತಿ ಸುರೇಶ್ (Bairathi Suresh) ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಸಂಸ್ಥೆಗಳಿಗೆ ಲಾಭ ಮಾಡಿಕೊಡುವುದಕ್ಕಿಂತ ಅವುಗಳ ನಿರ್ವಹಣೆ ಮತ್ತು ಸೇವೆ ಮುಂದುವರಿಸುವುದು ಸರ್ಕಾರದ ಆದ್ಯತೆ ಎಂದರು.
ಬಿಎಂಟಿಸಿ ಬಸ್ಗಳ ದರದಲ್ಲೂ ಬದಲಾವಣೆ
ಬೆಂಗಳೂರಿನ ಸಾರ್ವಜನಿಕ ಸಾರಿಗೆ ಬಳಸುವವರಿಗೆ ದರ ಪರಿಷ್ಕರಣೆ ನೇರ ಪರಿಣಾಮ ಬೀರಲಿದೆ. ಬಿಎಂಟಿಸಿ ಸಾಮಾನ್ಯ ಬಸ್ಗಳ ಕನಿಷ್ಠ ಟಿಕೆಟ್ ದರ ₹6ರಿಂದ ₹10ಕ್ಕೆ ಏರಿಕೆಯಾಗಿದೆ. ಗರಿಷ್ಠ ದರ ₹35ರಿಂದ ₹45ಕ್ಕೆ ಹೆಚ್ಚಿಸಲಾಗಿದೆ.
ಹವಾನಿಯಂತ್ರಿತ ವಜ್ರ ಬಸ್ಗಳ ಗರಿಷ್ಠ ಪ್ರಯಾಣ ದರ ₹75ರಿಂದ ₹90ಕ್ಕೆ ತಲುಪಿದೆ. ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯುವಜ್ರ ಬಸ್ಗಳ ಗರಿಷ್ಠ ಟಿಕೆಟ್ ದರ ₹405ರಿಂದ ₹425ಕ್ಕೆ ಏರಿಕೆಯಾಗಿದೆ.






