ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆಯ ಬೆಳ್ಳಿಹಬ್ಬದ ಅಂಗವಾಗಿ ಅಂತರ್ ವಲಯ ಪದ್ಮಶಾಲಿ ಸಂಘಟನೆಗಳ ಕ್ರೀಡೋತ್ಸವ ಉದ್ಘಾಟನೆ
Views: 1
ಕನ್ನಡ ಕರಾವಳಿ ಸುದ್ದಿ: ಬಸ್ರೂರು ವಲಯ ಪದ್ಮಶಾಲಿ ಕ್ರಿಯಾವೇದಿಕೆಯ 25ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಅಂತರ್ ವಲಯ ಪದ್ಮಶಾಲಿ ಸಂಘಟನೆಗಳ ಕ್ರೀಡೋತ್ಸವ ಅಕ್ಟೋಬರ್ 25ರಂದು ಬಸ್ರೂರು ಶ್ರೀ ಶಾರದಾ ಕಾಲೇಜಿನ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ.) ಇದರ ಅಧ್ಯಕ್ಷರಾದ ಶ್ರೀ ರವಿ ಶೆಟ್ಟಿಗಾರ್ ಕಾರ್ಕಳ ಕ್ರೀಡೋತ್ಸವ ಉದ್ಘಾಟಿಸಿ, ಮಾತನಾಡಿದ ಅವರು ಗ್ರಾಮೀಣ ಮಟ್ಟದಲ್ಲಿ ಹೊಸ ಪರಿಕಲ್ಪನೆಯ ಕ್ರೀಡಾಕೂಟಕ್ಕೆ ಅಭಿನಂದಿಸಿ, ವಲಯ ಸಂಘಟನೆಯ ಮೂಲಕ ಯಶಸ್ವಿಯಾದ ಕಾರ್ಯಕ್ರಮ ಮುಂದಿನ 16 ದೇವಸ್ಥಾನದ ವ್ಯಾಪ್ತಿಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಸ್ಪೂರ್ತಿಯಾಗಿದೆ ಎಂದರು.
ದ.ಕ.ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.) ಉಡುಪಿ ಅಧ್ಯಕ್ಷರಾದ ಶ್ರೀ ವಿಠಲ ಶೆಟ್ಟಿಗಾರ್ ಸಗ್ರಿ ಕ್ರೀಡಾ ಜ್ಯೋತಿ ಬೆಳಗಿಸಿ ಮಾತನಾಡಿ, ಬಸ್ರೂರು ವಲಯದವರು ಹಮ್ಮಿಕೊಂಡ ಯಾವುದೇ ಕಾರ್ಯಕ್ರಮವು ಅವಿಸ್ಮರಣೀಯ, ದೈಹಿಕ ಮತ್ತು ಮಾನಸಿಕ ವೃದ್ದಿಗೆ ಸರ್ವತೋಮುಖ ವಿಕಸನಕ್ಕೆ ಕ್ರೀಡೆಗಳು ಅತ್ಯಂತ ಅವಶ್ಯಕವಾಗಿದೆ ಎಂದರು.
ರಜತೋತ್ಸವ ಸಮಿತಿಯ ಅಧ್ಯಕ್ಷರಾದ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಲಯ ಸಂಘಟನೆಗಳ ಮೂಲಕ ನಡೆದ ಯಶಸ್ವಿ ಕ್ರೀಡಾಕೂಟ ನಮ್ಮ ಎಲ್ಲಾ ಸಮಾಜ ಸೇವಾ ಸಂಘಟನೆಗಳಿಗೆ ಮಾದರಿಯಾಗಿದೆ. ಕ್ರೀಡೆಯಿಂದ ಮಾನಸಿಕ ಸಮತೋಲನವನ್ನ ಕಾಪಾಡಿಕೊಂಡು ದೈನಂದಿನ ದಿನಚರಿಯಲ್ಲಿ ಯಾವುದೇ ಒತ್ತಡವಿಲ್ಲದೆ ಜೀವನ ಸಾಗಿಸಬಹುದು ಎಂದರು.
ವೇದಿಕೆಯಲ್ಲಿ ಶ್ರೀ ಸುರೇಶ ಶೆಟ್ಟಿಗಾರ್, ಆಡಳಿತ ಮೊಕ್ತೇಸರರು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನ, ಸಾಲಿಕೇರಿ, ದ.ಕ.ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘ (ರಿ.) ಉಡುಪಿ ಪ್ರಧಾನ ಕಾರ್ಯದರ್ಶಿ ಜಯರಾಮ್ ಮಣಿಪಾಲ, ಗೌರವಾಧ್ಯಕ್ಷರು ಪದ್ಮಶಾಲಿ ಸಮಾಜ ಸೇವಾ ಸಂಘ ಕೋಟೇಶ್ವರ ಚಂದ್ರಶೇಖರ ವಿ ಎಸ್, ಶ್ರೀ ಭಾಸ್ಕರ ಶೆಟ್ಟಿಗಾರ್ ಅಧ್ಯಕ್ಷರು ಪದ್ಮಶಾಲಿ ಸಮಾಜ ಸೇವಾ ಸಂಘ ಸಾಸ್ತಾನ, ಶ್ರೀ ಕರುಣಾಕರ ಶೆಟ್ಟಿಗಾರ್ ಅಧ್ಯಕ್ಷರು ಶೆಟ್ಟಿಗಾರ್ ಸಮಾಜ ಸೇವಾ ಸಂಘ ಅಮಾಸೆಬೈಲು, ಶ್ರೀ ಭಾಸ್ಕರ್ ಶೆಟ್ಟಿಗಾರ್ ಅಧ್ಯಕ್ಷರು, ಪದ್ಮಶಾಲಿ ಸಮಾಜ ಸೇವಾ ಸಂಘ ಬೈಕಾಡಿ, ಬಸ್ರೂರು ಕ್ರಿಯಾ ವೇದಿಕೆಯ ಗೌರವಾಧ್ಯಕ್ಷ ಶ್ರೀ ಗೋಪಾಲಕೃಷ್ಣ ಶೆಟ್ಟಿಗಾರ್, ಶ್ರೀ ಚಂದ್ರಶೇಖರ್ ಶೆಟ್ಟಿಗಾರ್ ಅಧ್ಯಕ್ಷರು ಪದ್ಮಶಾಲಿ ಕ್ರಿಯಾ ವೇದಿಕೆ ಬಸ್ರೂರು,ಕ್ರೀಡಾ ಸಂಚಾಲಕರಾದ ರಾಘವೇಂದ್ರ ಶೆಟ್ಟಿಗಾರ್, ಸತ್ಯನಾರಾಯಣ ಶೆಟ್ಟಿಗಾರ್, ವಿವೇಕಾನಂದ ಶೆಟ್ಟಿಗಾರ ಉಪಸ್ಥಿತರಿದ್ದರು.
ರಜತೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ರಾಜೇಂದ್ರ ಶೆಟ್ಟಿಗಾರ್ ಬಸ್ರೂರು ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳ್ಳಿ ಹಬ್ಬದ ಕಾರ್ಯಕ್ರಮ ಸ್ಮರಣೀಯವಾಗಬೇಕು ಎಂಬ ಉದ್ದೇಶದಿಂದ ಒಂದು ಶಾಲೆ ಮತ್ತು ದೇವಸ್ಥಾನದ ಪರಿಸರವನ್ನು ಸ್ವಚ್ಛಗೊಳಿಸಲಾಯಿತು, ಈಗಾಗಲೇ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ 118 ಯೂನಿಟ್ ಗಳ ರಕ್ತ ಸಂಗ್ರಹಿಸಲಾಯಿತು, ಮತ್ತು ನೂರಾರು ಜನರಿಗೆ ಥೈರಾಯ್ಡ್ , ಇಸಿಜಿ, ಡಿಪಿ ಹಾಗೂ ಶುಗರ್ ಪರೀಕ್ಷೆಗಳನ್ನು ನಡೆಸಲಾಯಿತು. ಅತಿ ಶೀಘ್ರದಲ್ಲಿ ಒಬ್ಬ ಕಡು ಬಡವರಿಗೆ ಮನೆ ನಿರ್ಮಾಣ ಪದ್ಮಶಾಲಿ ಸಂಘಗಳ ತಲಾ ಎರಡು ಮಂದಿ ಅಶಕ್ತರಿಗೆ ಆರ್ಥಿಕ ನೆರವು, ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಿ ಎಂದರು.
ಕ್ರೀಡಾಪಟು ಖುಷಿ ಶೆಟ್ಟಿಗಾರ್ ನೇತೃತ್ವದಲ್ಲಿ ತಂದ ಕ್ರೀಡಾ ಜ್ಯೋತಿಯನ್ನು ಸಗ್ರಿ ವಿಠಲ ಶೆಟ್ಟಿಗಾರ್ ಬೆಳಗಿಸಿದರು.
ಪಥ ಸಂಚಲನೆಯಲ್ಲಿ ಕೋಟೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘ ಪ್ರಥಮ ಸ್ಥಾನ, ಅಮಾಸೆಬೈಲು ಶೆಟ್ಟಿಗಾರ್ ಸಮಾಜ ಸೇವಾ ಸಂಘ ದ್ವಿತೀಯ ಸ್ಥಾನ ಪಡೆದುಕೊಂಡರು.
ಶೋಭಾ ಪ್ರಾರ್ಥಿಸಿದರು. ರಜತೋತ್ಸವ ಸಮಿತಿಯ ಕಾರ್ಯದರ್ಶಿ ರವೀಂದ್ರ ಶೆಟ್ಟಿಗಾರ್ ಸ್ವಾಗತಿಸಿದರು. ಶಿಕ್ಷಕಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಚಂದ್ರ ಶೆಟ್ಟಿ ಚಿತ್ರಪಾಡಿ ಕ್ರೀಡಾ ವೀಕ್ಷಕ ವಿವರಣೆ ನೀಡಿದರು.
ದೈಹಿಕ ಶಿಕ್ಷಕರಾದ ವೀರಣ್ಣ ಗಾಂವ್ಕರ್, ರಾಜಾರಾಂ ಶೆಟ್ಟಿ, ಅಶ್ವತ್ ರಾಥೋಡ್, ಮನೋಹರ್ ಲಂಬಾಣಿ, ವಿಶಾಲ್, ರಕ್ಷತ್ ವಿಶ್ವಾಸ್ ಕ್ರೀಡಾ ತೀರ್ಪುಗಾರರಾಗಿದ್ದರು.
ಪದ್ಮಶಾಲಿ ಕ್ರಿಯಾ ವೇದಿಕೆ ಬಸ್ರೂರು ಪ್ರಧಾನ ಕಾರ್ಯದರ್ಶಿ ಸುಬ್ಬಯ್ಯಶೆಟ್ಟಿಗಾರ್ ವಂದಿಸಿದರು















