ಬಾರ್ಕೂರು: 45ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ವೈಭವದ ಶೋಭಯಾತ್ರೆಯೊಂದಿಗೆ ಅದ್ದೂರಿಯಾಗಿ ಸಂಪನ್ನ
Views: 22
ಕನ್ನಡ ಕರಾವಳಿ ಸುದ್ದಿ:ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಬಾರ್ಕೂರು ಇವರ ಆಶ್ರಯದಲ್ಲಿ, ಬಾರ್ಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿದ 45ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ ಶಾಂತರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದ ಶೋಭಯಾತ್ರೆ ಅತ್ಯಂತ ಯಶಸ್ವಿಯಾಗಿ ಭಕ್ತಿಪೂರ್ಣವಾಗಿ ಸಂಪನ್ನಗೊಂಡಿತು.

ದಿನಾಂಕ 21.10.2026, ಬುಧವಾರ ಸಂಜೆ 5:00 ಗಂಟೆಗೆ ಬಾರ್ಕೂರು ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶೋಭಯಾತ್ರೆಗೆ ಚಾಲನೆ ನೀಡಲಾಯಿತು.
ಕುಣಿತ ಭಜನಾ ತಂಡಗಳ ಭಕ್ತಿಯ ಹೆಜ್ಜೆ ಚೆಂಡೆಯ ಸದ್ದಿನೊಂದಿಗೆ ಸಾಗಿದ ಈ ಭವ್ಯ ಮೆರವಣಿಗೆ ಬಾರ್ಕೂರು ದುರ್ಗಾ ಟ್ರೇಡರ್ಸ್ ತನಕ ಸಾಗಿ ಬಂದು, ನಂತರ ಬಾರ್ಕೂರು ಶ್ರೀ ಬಟ್ಟೆ ವಿನಾಯಕ ದೇವಸ್ಥಾನದ ಬಳಿ ಇರುವ ಪವಿತ್ರ ಕೋಟೆ ಕೆರೆಯಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹದ ಜಲಸ್ತಂಭನ ನಿರ್ವಿಘ್ನವಾಗಿ ನೆರವೇರಿತು.

ಮೆರವಣಿಗೆಯ ವಿಶೇಷ ಆಕರ್ಷಣೆ
ಶ್ರೀ ಬೊಬ್ಬರ್ಯೇಶ್ವರ ಸಿಂಗಾರಿ ಮೇಳ, ಸೂರಾಲು ಸಳ್ಳೆಕಟ್ಟೆ, ಕೊಕ್ಕರ್ಣೆ ಇವರ ಚೆಂಡೆ ವಾದನ, ಕುಣಿತ ಭಜನಾ ತಂಡಗಳಾದ ಶ್ರೀ ಬಟ್ಟೆ ವಿನಾಯಕ ಮಹಿಳಾ ಭಜನಾ ಮಂಡಳಿ, ಶೆಟ್ಟಿಗಾರ್ ಇಂಡಸ್ಟ್ರೀಸ್, ರಂಗನಕೇರಿ, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಭಜನಾ ಮಂಡಳಿ, ಶಿವಗಿರಿ, ಬಾರ್ಕೂರು, ಶ್ರೀ ಶಶಿಗೂಳಿ ಬ್ರಹ್ಮ ಮಹಿಳಾ ಭಜನಾ ಮಂಡಳಿ, ಹೇರಾಡಿ, ಕೂಡ್ಲಿ ಶ್ರೀ ದುರ್ಗಾಂಬಾ ಮಹಿಳಾ ಭಜನಾ ಮಂಡಳಿ, ರಂಗನಕೆರೆ, ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ,ಶಿರೂರು-ಮುದ್ದುಮನೆ, ಶ್ರೀ ಜೈಗಣೇಶ ಭಜನಾ ಮಂಡಳಿ, ಬಿಲ್ಲಾಡಿ ಹಾಗೂ ಇನ್ನಿತರ ತಂಡಗಳ ಕುಣಿತ ಭಜನೆ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು.

ಶ್ರೀ ಶಾರದಾ ಮೂರ್ತಿಯ ಸೇವಾಕರ್ತರು :ಶ್ರೀ ರಾಜೀವ ಶೆಟ್ಟಿಹೊಳೆ, ಹೊದ್ದಿನ ಮನೆ, ಹೋಟೆಲ್ ಶಿವಾನಿ ಇನ್, ಗದಗ,
ಪುರ ಮೆರವಣಿಗೆ ಹಾಗೂ ಕೆರೆ ಉತ್ಸವ ದಿನದ ಉಪಹಾರ ಸೇವಾಕರ್ತರು: ಶ್ರೀ ಆದರ್ಶ್ ಶೆಟ್ಟಿ, ಉಡುಪಿ
ಶ್ರೀ ಶಾರದಾ ದೇವಿಯ 5 ದಿನದ ಪೂಜಾ ಅಲಂಕಾರ ಸೇವಾಕರ್ತರು: MAHALASA – Civil Engineers & Contractors, Barkur (ಶ್ರೀ ಗಣೇಶ್ ಪೈ ಮತ್ತು ಶ್ರೀ ಪ್ರಕಾಶ್ ಪೈ)
ಶ್ರೀ ಶಾರದಾ ಮಂಟಪ ಹಾಗೂ ಪುರ ಮೆರವಣಿಗೆ ರಥದ ಅಲಂಕಾರ ಸೇವಾಕರ್ತರು: ಚಿತ್ತಾರ ಶಾಮಿಯಾನ & ಡೆಕೋರೇಷನ್, ಸಾಮ್ರಾಜ್ಯ ರೆಸಿಡೆನ್ಸಿ
ಶೋಭಯಾತ್ರೆಗೆ ಕೇಸರಿ ಶಾಲು ಕಾಣಿಕೆಯಾಗಿ ನೀಡಿದವರು: ಶ್ರೀ ಪ್ರವೀಣ್ ಗಡಿಯಾರ್, ಬಾರ್ಕೂರು
ಆಕರ್ಷಕ ಸಿಡಿಮದ್ದು ಪ್ರೋತ್ಸಾಹಕರು: ಶ್ರೀ ರಕ್ಷಿತ್, ಬಾರ್ಕೂರು
ಚಂಡೆ ಬಳಗದ ಪ್ರೋತ್ಸಾಹಕಾರದ ಶ್ರೀ ವಿಖ್ಯಾತ್ ಶೆಟ್ಟಿ ನಡೂರು.

ಧಾರ್ಮಿಕ ಕಾರ್ಯಗಳ ಸೇವೆಗೆ ಧನಸಹಾಯ ನೀಡಿದ ಎಲ್ಲಾ ದಾನಿಗಳಿಗೆ, ಐದು ದಿನಗಳ ಪರ್ಯಂತ ಭಜನಾ ಸೇವೆ ನೀಡಿದ ಎಲ್ಲಾ ಭಜನಾ ಮಂಡಳಿಯವರಿಗೆ ಪುರ ಮೆರವಣಿಗೆಯಲ್ಲಿ ಭಾಗವಹಿಸಿ ಮೆರುಗು ನೀಡಿದ ಎಲ್ಲಾ ಕುಣಿತ ಭಜನಾ ತಂಡಗಳಿಗೆ, ಮೆರವಣಿಗೆಗೆ ಕಳೆ ತಂದ ಶ್ರೀ ಬೊಬ್ಬರ್ಯೇಶ್ವರ ಸಿಂಗಾರಿ ಮೇಳದ ಚೆಂಡೆ ಬಳಗಕ್ಕೆ, ವಿದ್ಯುತ್ ದೀಪಾಲಂಕಾರ ಹಾಗೂ ಸೌಂಡ್ ಸಿಸ್ಟಮ್ ವ್ಯವಸ್ಥೆ ಮಾಡಿದ ಶ್ರೀ ಜಯ ಕುಂದರ್ ಮತ್ತು ಬಳಗದವರಿಗೆ, ಜಲ ಸ್ತಂಭನದಲ್ಲಿ ಸಹಕಾರ ನೀಡಿದ ಮೊಗವೀರ ಯುವಕ ಸಂಘ ಬೆಣ್ಣೆ ಕುದ್ರು ಬಾರಕೂರು ಇದರ ಸದಸ್ಯರಿಗೆ, ಶಾಂತಿ ಸುವ್ಯವಸ್ಥೆ ಕಾಪಾಡಿದ ಬ್ರಹ್ಮಾವರ ಆರಕ್ಷಕ ಠಾಣೆಯ ಸಿಬ್ಬಂದಿ ವರ್ಗದವರಿಗೆ, ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಸರ್ವರಿಗೂ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಬಾರ್ಕೂರು ವತಿಯಿಂದ ಅನಂತ ಅನಂತ ಧನ್ಯವಾದಗಳು
ಶ್ರೀ ಬಿ ಶಾಂತರಾಮ ಶೆಟ್ಟಿ (ಅಧ್ಯಕ್ಷರು) ಹಾಗೂ ಸರ್ವ ಸದಸ್ಯರು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಬಾರ್ಕೂರು






