ನೀಲಿ ಡ್ರಮ್ ಮರ್ಡರ್ ಕೇಸ್: ಪತಿ ಕೊಂದ ಪತ್ನಿ ಮತ್ತು ಪ್ರಿಯಕರನಿಗೆ ಗಲ್ಲು ಶಿಕ್ಷೆ
Views: 29
ಕನ್ನಡ ಕರಾವಳಿ ಸುದ್ದಿ: ದೇಶದಾದ್ಯಂತ ನೀಲಿ ಡ್ರಮ್ ಮರ್ಡ್ರ್ ಎಂದೇ ಪ್ರಚಾರ ಪಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೀರತ್ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರಬಂದಿದ್ದು, ಸೌರಬ್ ರಜಪೂತ್ನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಪತ್ನಿ ಮುಸ್ಕಾನ್ ರಸ್ತೋಗಿ, ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾನಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿದೆ.
ಕಳೆದು ಎರಡು ವರ್ಷದಿಂದ ನಡೆಯುತ್ತಿದ್ದ ಈ ಪ್ರಕರಣದ ವಿಚಾರಣೆಗೆ ಇಂದು ಪೂರ್ಣವಿರಾಮ ದೊರೆತಿದ್ದು, ಜಿಲ್ಲಾ ಮ್ಯಾಜಸ್ಟ್ರೇಟ್ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ, ಇಬ್ಬರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ್ದಾರೆ.
ತೀರ್ಪನ್ನು ನೀಡುವ ಸಂದರ್ಭದಲ್ಲಿ, ಆರೋಪಿಗಳು ಜೈಲಿನಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರೇ, ಮೃತ ಸೌರಬ್ನ ಕುಟುಂಬದವರು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಿದ್ದರು. ತೀರ್ಪನ್ನು ಪ್ರಕಟಿಸುವಾಗ, ನ್ಯಾಯಾಧೀಶರು ಮಹಾಕಾವ್ಯ ಮಹಾಭಾರತವನ್ನು ಉಲ್ಲೇಖಿಸುತ್ತಾ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವುದು ಕೂಡ ಧರ್ಮದ ರೂಪವಾಗಿದೆ ಎಂದು ಹೇಳಿದ್ದು, ವಿಶೇಷವಾಗಿತ್ತು.
ಏನಿದು ನೀಲಿ ಡ್ರಮ್ ಮರ್ಡರ್?
ಮಾರ್ಚ್ 3, 2025 ರಂದು ಆರೋಪಿ ಮುಸ್ಕಾನ್ ರಾಸ್ತೋಗಿ, ಮರ್ಚೆಂಟ್ ನೇವಿ ಆಫೀಸರ್ ಆಗಿದ್ದ ಆಕೆಯ ಪತಿ, ಸೌರಭ್ನಿಗೆ ಊಟದಲ್ಲಿ ಔಷಧ ನೀಡಿ, ಅಸ್ವಸ್ಥನಾಗುವಂತೆ ಮಾಡಿದ್ದಳು. ನಂತರ ಅಲ್ಲಿಗೆ ಬಂದ ಆಕೆಯ ಪ್ರಿಯಕರ, ಸಾಹಿಲ್ ಶುಕ್ಲಾ ಚಾಕುವಿನಿಂದ ಚುಚ್ಚಿ ಸೌರಭ್ನನ್ನು ಕೊಲೆ ಮಾಡಿದ್ದಾನೆ.
ಆಮೇಲೆ, ಮೃತ ದೇಹವನ್ನು ತುಂಡು-ತುಂಡಾಗಿ ಕತ್ತರಿಸಿ, ನೀಲಿ ಬಣ್ಣದ ಡ್ರಮ್ನಲ್ಲಿ ತುಂಬಿಸಿ, ಅದರೊಳಗೆ ಸಿಮೆಂಟ್ ಅನ್ನು ಬೆರೆಸಿ, ಆ ಡ್ರಮ್ ಅನ್ನು ಭೂಮಿಯಲ್ಲಿ ಹೂತಿಟ್ಟು ಇವರಿಬ್ಬರು ಹಿಮಾಚಲ್ಗೆ ಪರಾರಿಯಾಗಿದ್ದಾರೆ.
ನಂತರ ಸೌರಭ್ ಮನೆಯವರಿಗೆ ಮಗಳ ಸಂಪರ್ಕ ಕಡಿಯಗೊಂಡಿರುವುದು ಗಮನಕ್ಕೆ ಬಂದ ಹಿನ್ನಲೆ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ. ನಂತರ ಪೊಲೀಸರು ಮುಸ್ಕಾನ್ ಹಾಗೂ ಆಕೆಯ ಪ್ರಿಯಕರನ ಮಾಹಿತಿ ತಿಳಿದ ಮೇಲೆ, ಬಚ್ಚಿಟ್ಟಿದ್ದ ಡ್ರಮ್ ಭೂಮಿಯಿಂದ ಹೊರಬಂದಿದೆ. ನಂತರ ಇವರಿಬ್ಬರ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಸರಿಯಾಗಿ ತನಿಖೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ ಹಿನ್ನಲೆ, ಈಗ ಈ ದುಷ್ಟರಿಗೆ ಶಿಕ್ಷೆ ದೊರೆತಿದೆ.






