ರೈಲ್ವೆ ನೇಮಕಾತಿ ಮಂಡಳಿಯಿಂದ 3,548 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
Views: 24
ಕನ್ನಡ ಕರಾವಳಿ ಸುದ್ದಿ: ಖಾಲಿ ಇರುವ 3,548 ಹುದ್ದೆಗಳ ಭರ್ತಿಗೆ ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿ (Railway Recruitment Board) ಅರ್ಜಿ ಆಹ್ವಾನಿಸಿದೆ.
ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ವೈಸರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟ್ಸ್ ಅಸಿಸ್ಟಂಟ್ ಕಮ್ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿವೆ.
ಆರ್‌ಆರ್‌ಬಿ ಬೆಂಗಳೂರು ವಲಯದಲ್ಲಿ 346 ಹುದ್ದೆಗಳಿವೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ನವೆಂಬರ್ 6
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್‌ಪೈಸರ್-127, ಗೂಡ್ಸ್ ಟ್ರೈನ್ ಮ್ಯಾನೇಜರ್-2,750, ಜೂನಿಯರ್ ಅಕೌಂಟ್ಸ್ ಅಸಿಸ್ಟಂಟ್ ಕಮ್ ಟೈಪಿಸ್ಟ್-300, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್-371 ಹುದ್ದೆಗಳಿವೆ. ದೇಶದ ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪೂರೈಸಿದವರು ಅಥವಾ ತತ್ಸಮಾನ ವಿದ್ಯಾರ್ಹತೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 33 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ.
ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಯೋಧರಿಗೆ 3ರಿಂದ 8 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಅರ್ಜಿ ಶುಲ್ಕವಾಗಿ ಎಸ್‌ಸಿ, ಎಸ್‌ಟಿ, ಇಬಿಸಿ ಅಭ್ಯರ್ಥಿಗಳು, ಮಾಜಿ ಯೋಧರು, ಮಹಿಳೆಯರು ಮತ್ತು ತೃತೀಯ ಲಿಂಗಿಗಳು 250 ರುಪಾಯಿ ಮತ್ತು ಉಳಿದೆಲ್ಲ ಅಭ್ಯರ್ಥಿಗಳು 500 ರುಪಾಯಿ ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಮೊದಲ ಮತ್ತು 2ನೇ ಹಂತದ ಸಿಬಿಟಿ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮೊದಲ ಹಂತದ ಸಿಬಿಟಿಯಲ್ಲಿ 100 ಪ್ರಶ್ನೆಗಳಿರಲಿದ್ದು, ಪ್ರತಿ ಪ್ರಶ್ನೆಗೆ 1 ಅಂಕಗಳಿವೆ. ಜನರಲ್ ಅವರ್ನೆಸ್-40, ಗಣಿತ-30, ಜನರಲ್ ಇಂಟಲಿಜೆನ್ಸ್ & ರೀಸನಿಂಗ್-30 ಪ್ರಶ್ನೆಗಳಿವೆ. ಪರೀಕ್ಷೆಯ ಅವಧಿ: 90 ನಿಮಿಷ. ದ್ವಿತೀಯ ಹಂತದ ಸಿಬಿಟಿಯಲ್ಲಿ 120 ಅಂಕಳಿವೆ. ಒಟ್ಟು 90 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಜನರಲ್ ಅವರ್ನೆಸ್-50, ಗಣಿತ-35, ಜನರಲ್ ಇಂಟಲಿಜೆನ್ಸ್ & ರೀಸನಿಂಗ್-35 ಪ್ರಶ್ನೆಗಳು ಸೇರಿ ಒಟ್ಟು 120 ಪ್ರಶ್ನೆಗಳಿರುತ್ತವೆ. ಗಮನಿಸಿ ಎರಡೂ ಹಂತಗಳಲ್ಲಿ ಪ್ರತಿ ತಪ್ಪು ಉತ್ತರಕ್ಕೆ ನೆಗೆಟಿವ್ ಅಂಕಗಳಿವೆ. ಹೀಗಾಗಿ ಸರಿಯಾಗಿ ಯೋಚಿಸಿ ಉತ್ತರಿಸಿ.






